10ರೂ.ಗಳ ಕಾಯಿನ್ ಚಾಲನೆಯಲ್ಲಿರುವುದರ ಬಗ್ಗೆ ಅರಿವು ಮೂಡಿಸಲು ಮನವಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೦: ದಾವಣಗೆರೆ ಲೋಕಸಭಾ ಕ್ಷೇತ್ರದ ರಣ ಕಣ ರಂಗೇರುತ್ತಿದ್ದು, ಲೋಕಸಭಾ ಕ್ಷೇತ್ರ 13 ರ ಜನಹಿತ ಪಕ್ಷದ ಅಭ್ಯರ್ಥಿ ಹೆಚ್.ಎಸ್. ದೊಡ್ಡೇಶ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಕೇವಣಿ ರೂಪದಲ್ಲಿ 25000 ರೂ.,ಗಳ ಮೊತ್ತವನ್ನು 10 ರೂಗಳ ಕಾಯಿನ್ ಗಳಲ್ಲಿ ಪಾವತಿಸಿದ್ದಾರೆ.ಬಡವರ ಪಕ್ಷವೆಂದು ಸೂಚಕವಾಗಿ 10ರೂ.ಗಳ ಕಾಯಿನ್ ಮುಖಾಂತರ ತೋರಿಸುವ ಪ್ರಯತ್ನ ಇವರದ್ದಾಗಿದೆ. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ 10 ರೂ.ಗಳ ಕಾಯಿನ್ ಬಳಕೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು 10 ರೂ.ಗಳನ್ನು ಪಡೆಯಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಹೆಚ್.ಎಸ್. ದೊಡ್ಡೇಶ್ ಅವರು 10 ರೂ.ಗಳ ಕಾಯಿನ್ ಚಾಲನೆಯಲ್ಲಿದೆ ಎಂಬುದನ್ನು ಜನರಿಗೆ ಅರಿವಾಗುವಂತೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪರತುರಾಮ್ ವರಗೋಡದಿನ್ನಿ, ಶರತ್ ತಂಡವೇಶ್ವರ, ಶ್ರೀಧರ್, ಎಂ ಎನ್ ರೆಹಮಾನ್‌ ಖಾನ್ ಇವರು ಜೊತೆಯಲ್ಲಿದ್ದರು
