ಜೆಡಿಎಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕಾರ್ಯಕರ್ತರು

ಸಂಜೆವಾಣಿ ವಾರ್ತೆ
ಮಲೇಬೆನ್ನುರು.ಏ.೨೦; ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವು ನಿಶ್ಚಿತ’ ಎಂದು ಹರಿಹರ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ ವಿಶ್ವಾಸ ವ್ಯಕ್ತಪಡಿಸಿದರು.ಹರಿಹರ ತಾಲ್ಲೂಕಿನ ವಾಸನ ಗ್ರಾಮದಲ್ಲಿ ಜೆಡಿಎಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ  ಹಲವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಜನರ ಸಂಕಷ್ಟಕ್ಕೆ ನೆರವಾಗಿದ್ದೇವೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಒಂದು ವಾರ್ಷಿಕ ಲಕ್ಷ  ನೀಡುವ ಭರವಸೆ ಪಕ್ಷ ನೀಡಿದೆ ನಮ್ಮ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತೊರೆದು  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ವಾಸನ ಗ್ರಾಮದ ಮಾಸ್ತಿ ತಿಪ್ಪೇಸ್ವಾಮಿ,ಮಾಸ್ತಿ ಸೋಮಪ್ಪ, ಮಾಸ್ತಿ ಈರಣ್ಣ, ಕೆ ಮಂಜಪ್ಪ, ಎಸ್ ಕೆ ನಾಗಪ್ಪ, ಎಸ್ ನಾಗಪ್ಪ, ಎಸ್ ಬಸಪ್ಪ, ಟೀ ಗದಿಗೆಪ್ಪ, ಪಿ ಎಚ್ ಹನುಮಂತಪ್ಪ, ಡಿ ಗೋಪಾಲಪ್ಪ, ಬಿ ತಿಪ್ಪಣ್ಣ, ಎಂಎಸ್ ರಾಜು, ವೈ ಶ್ರೀನಿವಾಸ್, ಅಶೋಕಪ್ಪ ಸಿದ್ದಾಪುರ, ಗಂಟೆ ಶಿವಾನಂದಪ್ಪ, ಗಂಟೆ ನಿಂಗರಾಜಪ್ಪ, ಎಂ ಎಚ್ ಕುಮಾರ, ಮಿಲ್ಟ್ರಿ ಮಂಜಪ್ಪ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್.ಬಿ.ಹನುಮಂತಪ್ಪ, ಎಂ.ಬಿ.ಅಬಿದ್ ಸ್ವಾಗತಿಸಿದರುಈ ಸಂದರ್ಭದಲ್ಲಿ ಗ್ರಾಮದ  ಕಾಂಗ್ರೆಸ್ ಮುಖಂಡರಾದ ಗೂವಿನಹಳ ರಾಜಪ್ಪ ಬಿ.ಎಸ್. ಮಂಜಪ್ಪ, ಹುಲುಗಪ್ಪ ಕೆಚಂದ್ರಪ್ಪ ಸದಸ್ಯರು ಗ್ರಾಮ ಪಂಚಾಯತಿ, ಸಿದ್ದಪ್ಪ ಸದಸ್ಯರು ಗ್ರಾಮ ಪಂಚಾಯತಿ, ಅಶೋಕ ಸದಸ್ಯರು ಗ್ರಾಮ ಪಂಚಾಯತಿನಾಗರಾಜ್ ತಿರುಕಪಜ್ಜರ, ಕೆ ಮಲ್ಲಪ್ಪ, ಕೆ ಶಿವಪ್ಪ, ಸಂತೋಷ್, ಮಾರುತಿ ಗುತ್ತಿಗೆದಾರರು, ಚಂದ್ರಪ್ಪ,  ಕೆ ಚೆನ್ನಪ್ಪ, ಇದ್ದರು.