ಬಂಡೀಪುರ: ವಾಹನ ಡಿಕ್ಕಿಯಾಗಿ ಅಪರೂಪದ ಪುನುಗು ಬೆಕ್ಕು ಸಾವು
ಸಂಜೆವಾಣಿ ವಾರ್ತೆ
ಚಾಮರಾಜನಗರ,ಏ.20- ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಪುನಗು ಬೆಕ್ಕು ಮೃತಪಟ್ಟಿದೆ.
ಗುರುವಾರ ರಾತ್ರಿ 8.30ರ ಸಮಯದಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ವಾಹನಕ್ಕೆ ಡಿಕ್ಕಿಯಾಗಿದೆ.
ಆಫ್ರಿಕಾ ಮತ್ತು ಏμÁ್ಯ ಖಂಡದ ಕಾಡುಗಳಲ್ಲಿ ಕಂಡು ಬರುವ ಈ ಅಪರೂಪದ ಬೆಕ್ಕು ಇತ್ತೀಚಿನ ದಿನಗಳಲ್ಲಿ ಬಂಡೀಪುರ ಭಾಗದಲ್ಲಿ ಕಂಡು ಬರುತ್ತದೆ.
ರಾತ್ರಿ ಸಂಚಾರ ಮಾಡುವ ಪ್ರಾಣಿಯಾದ್ದರಿಂದ ರಾಷ್ಟ್ರೀಯ ಹೆದ್ದಾರಿ ಬಂದು ಡಿಕ್ಕಿಯಾಗಿದೆ. ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು ಮನವಿ ಮಾಡಿದ್ದಾರೆ.
ಪುನಗು ಬೆಕ್ಕಿನ ಕಳೇಬರವನ್ನು ಅರಣ್ಯ ಸಿಬ್ಬಂದಿಗಳು ತೆಗೆದುಕೊಂಡು ಹೋಗಿ ಮುಂದಿನ ಕ್ರಮಕೈಗೊಂಡಿದ್ದಾರೆ.