ರಾಜ್ಯ ಸರ್ಕಾರದ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ
ಸಂಜೆವಾಣಿ ನ್ಯೂಸ್
ಮೈಸೂರು: ಏ.20:- ಕಾಂಗ್ರೆಸ್ ಕಾಪೆರ್Çೀರೇಟರ್ ಮನೆಗೆ ರಕ್ಷಣೆ ಕೊಡಲು ಆಗದವರು ಇನ್ನು ರಾಜ್ಯಕ್ಕೆ ರಕ್ಷಣೆ ಕೊಡುತ್ತಾರೆಯೇ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈ ಸರ್ಕಾರ ಒಂದು ಸಮುದಾಯದ ಓಲೈಕೆಗೆ ಮುಂದಾಗಿದೆ ಇದೇ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿವೆ.
ಸಿಎಂ ಮತ್ತು ಗೃಹಸಚಿವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಮಾಹಿತಿ ತಿಳಿಯದೇ ಸೂಕ್ಷ್ಮತೆ ಅರಿತುಕೊಳ್ಳದೆ ಮಾತನಾಡಬಾರದು ಎಂದರು.
ರಾಜ್ಯ ಸರ್ಕಾರ ಖಜಾನೆ ಖಾಲಿಯಾಗಿದೆ. 11 ತಿಂಗಳಲ್ಲಿ ರಾಜ್ಯ ಬೊಕ್ಕಸ ಖಾಲಿ ಮಾಡಿದ್ದೇವೆ. ಹೀಗಾಗಿ ಭಿಕ್ಷುಕರಾಗಿದ್ದೇವೆ ಎಂದು ಕಾಂಗ್ರೆಸ್ ನವರು ಚೊಂಬು ಹಿಡಿದಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಹಿಂದು ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್ ನ ಮನಸ್ಥಿತಿ ಏನು ಎಂಬುದಕ್ಕೆ ಹುಬ್ಬಳ್ಳಿ ಘಟನೆ ಸಾಕ್ಷಿ. ಕಾಂಗ್ರೆಸ್ ಈ ವಿಚಾರವಾಗಿ ಜನರ ಮುಂದೆ ನಗ್ನವಾಗಿದೆ ಎಂದು ಅವರು ತಿಳಿಸಿದರು.
ಸಿಎಂ ಮತ್ತು ಡಿಸಿಎಂ ಇಬ್ಬರು ಬಹಳ ಬೇಜಾವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ. ಒಂದು ವರ್ಗದ ಓಲೈಕೆಯಿಂದಲೇ ಈ ರೀತಿ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂದರು.
ಮೋದಿ ಹಾಡು ಬರೆದರು ಅಂಥ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಅಂದರೇ ಪರಿಸ್ಥಿತಿ ಯಾವ ಹಂತಕ್ಕೆ ಹೋಗಿರಬಹುದು ನೋಡಿ ಎಂದು ಕುಮಾರಸ್ವಾಮಿ ಹೇಳಿದರು.
ಮೊದಲು ಟಿವಿಗಳಲ್ಲಿ ರಾತ್ರಿ ಹತ್ತು ಗಂಟೆ ಮೇಲೆ ಅಫರಾದ ಸುದ್ದಿ ತೋರಿಸುತ್ತಿದ್ದರು. ಈಗ ಬೆಳಗ್ಗೆಯಿಂದಲೇ ಅಫರಾದ ಸುದ್ದಿ ತೋರಿಸುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಸ್ಥಿತಿ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಸರ್ಕಾರದ ಖಜಾನೆ ಚಂಬೂ ಖಾಲಿಯಾಗಿದೆ.ಅದನ್ನ ದಯವಿಟ್ಟು ತುಂಬಿಸಿಕೊಡಿ ಅಂಥ ಮೋದಿ ಅವರ ಬಳಿ ಕೇಳುತ್ತಿದೆ ಎಂದು ಅವರು ಹೇಳಿದರು.
ಕೋವಿಡ್ ಕಾಲದಲ್ಲೂ ರಾಜ್ಯದ ಖಾಜನೆ ಸುಭಿಕ್ಷವಾಗಿತ್ತು. ಕಾಂಗ್ರೆಸ್ ನ ಅಪಪ್ರಚಾರದ ನಡುವೆಯೂ ಖಜಾನೆಯನ್ನ ಬಿಜೆಪಿ ಉತ್ತಮ ಸ್ಥಿತಿಯಲ್ಲಿಟ್ಟಿತ್ತು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಖಜಾನೆ ಖಾಲಿಯಾಗಿದೆ. ಕನ್ನಡಿಗರ ಕೈಗೆ ಖಾಲಿ ಜಂಬೂ ಕೊಟ್ಟಿದ್ದಾರೆಂದು ಅವರು ಹೇಳಿದರು.
ಆ ಜಂಬೂ ತುಂಬಿಸಿಕೊಡಿ ಅಂಥ ಈಗ ಪ್ರಧಾನಿ ಬಳಿ ಕೇಳಲು ನಿಂತಿದ್ದಾರೆಂದರು.
ಸುತ್ತೂರು ಮಠ ಭೇಟಿಯ ವಿಚಾರ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ ಮಠಕ್ಕೆ ಬಂದರೂ ಈಗ ಕೆಲವರಿಗೆ ಸ್ಪಷ್ಟಿಕರಣ ಕೊಡಬೇಕಾದ ಸ್ಥಿತಿ ನಮಗೆ ಬಂದಿದೆ ಎಂದರು.
ನಾವು ಮೈಸೂರಿಗೆ ಬಂದಾಗಲೆಲ್ಲಾ ಮಠಕ್ಕೆ ಬರುತ್ತೇವೆ.ಮಠವನ್ನ ನಾವು ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದರು.
ಇವತ್ತು ನಮ್ಮ ಜೊತೆ ಮಂಡ್ಯ ಭಾಗದ ಕೆಲ ಮುಖಂಡರು ನಮ್ಮ ಜೊತೆ ಬಂದಿದ್ದಾರೆಂದು ಕುಮಾರಸ್ವಾಮಿ ಹೇಳಿದರು.