ರೇಷ್ಮೆ ದರ ನಿಗಧಿ ಪರ-ವಿರೋಧ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಏ.20:- ರೇಷ್ಮೆಗೂಡಿನ ದರವನ್ನು ವೈಜ್ಞಾನಿಕವಾಗಿ ನಿಗದಿ ಪಡಿಸುವ ವಿಚಾರವಾಗಿ ಪರ ಹಾಗೂ ವಿರೋದ ಪ್ರತಿಭಟನೆಗಳು ಶುಕ್ರವಾರ ನಡೆದವು.
ಮೈಸೂರಿನ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿರುವ ರೇಷ್ಮೆ ಮಾರುಕಟ್ಟೆ ಮುಂಭಾಗ ಜಮಾವಣೆಗೊಂಡ ರೈತರ ಎರಡು ಗುಂಪು ಇಲಾಖೆ ಪರ ಹಾಗೂ ವಿರೋಧವಾಗಿ ಪ್ರತಿಭಟಿಸಿದರು.
ಸಾಮೂಹಿಕ ನಾಯಕತ್ವದ ಧರಣಿ: ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಸದರಿ ಮಾರುಕಟ್ಟೆಯಲ್ಲಿ ಎರಡನೇ ಅವಧಿಗೆ ರೈತರಿಗೆ ಮೊದಲ ಗ್ರೇಡ್ ಗಿಂತಲೂ ಕಡಿಮೆ ಬೆಲೆ ನಿಗಧಿ ಮಾಡುತ್ತಿರುವುದು ಅವೈಜ್ಞಾನಿಕ ವಾಗಿದೆ. ಇಂತಹ ಅವೈಜ್ಞಾನಿಕ ಪದ್ಧತಿಯನ್ನು ಕೈ ಬಿಟ್ಟು ನಿರ್ಧಿಷ್ಠ ದರ ನಿಗಧಿಗೆ ಅಧಿಕಾರಿಗಳು ಕ್ರಮವಹಿಸಬೇಕು. ಇನ್ನೂ ಅನೇಕ ಕಡೆಗಳಲ್ಲಿ ರೇಷ್ಮೆ ಮನೆಗಳ ಅನುದಾನ ಬಿಡುಗಡೆಯಾಗಿಲ್ಲ. ಬೀಚಿಂಗ್ ಪೌಂಡರ್ ನೀಡಿಲ್ಲ ಇಂತಹ ಸಾಲಷ್ಟು ಸಮಸ್ಯೆಗಳನ್ನು ಬಗರಹರಿಸಬೇಕು. ಕೆಲ ಕಿರಿಯ ಮಟ್ಟದ ಅಧಿಕಾರಿಗಳು ರೈತರ ಹಣ ಬಿಡುಗಡೆಗೆ ಪರೋಕ್ಷವಾಗಿ ಹಣದ ಬೇಡಿಕೆಯಿಟ್ಟಿದ್ದು ಅಂತಹವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೇಷ್ಮೆ ಬೆಳೆಗಾರರಾದ ನಟರಾಜು ಚಾಮರಾಜನಗರ, ಬಸವನಪುರ ಸದಾನಂದ , ಚಿನಂಬಲ್ಲಿ ಮಹೇಶ್ , ಬೀರಿ ಹುಂಡಿ ಮಹೇಶ್ , ದೊಡ್ಡುಂಡಿ ಕೃಷ್ಣ ತಮ್ಮ ಸಮಸ್ಯೆ ಹೇಳಿಕೊಂಡರು. ರೈತ ಸಂಘಟನೆಯ ಪ್ರಮುಖರದಂತ ರಾಮೇಗೌಡ, ಹೊನ್ನೂರು ಪ್ರಕಾಶ್, ಮಂಜು ಕಿರಣ್ , ರಘು ಇಮ್ಮವೂ , ಸತೀಶ್ ರಾವ್ , ವೆಂಕಟೇಶ್ ಗಳಿಗರಹುಂಡಿ , ಮಹೇಶ್ ಗುಂಡ್ಲುಪೇಟೆ , ಅಹಲ್ಯಾ ನಾಗರಾಜು ನಟರಾಜು, ಕಳ್ಳಿಪುರ ಮಹದೇವಸ್ವಾಮಿ, ಅಲ್ಗಂಚಿ ದೊಡ್ಡಯ್ಯ ಹಾಗೂ ಶೈಲಜಾ ರವರು ಉಪಸ್ಥಿತರಿದ್ದರು.
ಪರವಾಗಿಯೂ ಪ್ರತಿಭಟನೆ: ಇದೇ ವೇಳೆ ಕೆಂಪಯ್ಯನಹುಂಡಿ ಜಯಕುಮಾರ್ ನೇತೃತ್ವದಲ್ಲಿ ರೇಷ್ಮೆ ಬೆಳೆಗಾರರು ಪ್ರತಿಭಟಿಸಿ ರೈತ ಸಂಘದ ನೇರ ಪ್ರತಿಭಟನೆ ವಿರೋಧಿಸಿದರು. ಕಳೆದ ಐದು ವರ್ಷದಿಂದ ಮೈಸೂರಿನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನದಲ್ಲಿ ಕೆಲವರು ಹೋರಾಟ ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ನಿಗಧಿ ಪ್ರಕ್ರಿಯೆ ಇಲ್ಲ. ಇದಾಗಿಯೂ ವೈಜ್ಞಾನಿಕವಾಗಿ ಪ್ರತಿಭಟಿಸುವುದು ಸರಿಯಲ್ಲ. ಸಮಸ್ಯೆಗಳಿದ್ದರೆ ಸಭೆ ನಡೆಸಿ ಅಧಿಕಾರಿಗಳ ಮೂಲಕ ಬಗೆಹರಿಸಬೇಕು. ಏಕಾಎಕಿ ಪ್ರತಿಭಟಿಸಿದರೆ ಮಾರಕಟ್ಟೆಗೆ ಕೆಟ್ಟ ಹೆಸರು ಬಂದರೆ ಕೊಳ್ಳುವವರು ಬಾರದಿದ್ದರೆ ನಮ್ಮ ಸ್ಥಿತಿ ಎನೆಂದು ಪ್ರಶ್ನಿಸಿದರು.
ನಾವು ಅಧಿಕಾರಿಗಳ ಪರವಾಗಿ ಅಲ್ಲ, ನ್ಯಾಯಯುತವಾಗಿ ಮಾರುಕಟ್ಟೆ ನಡೆಯುತ್ತಿದೆ. ಸಹಜವಾಗಿ ನಡೆಯಲು ಬಿಡಿ ಎಂದು ಒತ್ತಾಯಿಸಿ ಈ ಕುರಿತು ಮನವಿ ಸಲ್ಲಿಸಿದರು. ಚೆನ್ನೇಗೌಡ, ನಾಗೇಶ್, ಮಧು, ಜಗದೀಶ್,
ಚಾಮುಂಡಿ ಮೇಲಾಣೆ 10 ರೂಪಾಯಿ ಪಡೆದಿಲ್ಲ:
ಎರಡು ಗುಂಪಿನ ಮನವಿ ಆಲಿಸಿದ ರೇಷ್ಮೆ ಇಲಾಖೆ ಡಿಡಿ ಮಂಜುಳಾ ಅವರು ಚಾಮುಂಡೇಶ್ವರಿ ಮೇಲಾಣೆಗೂ ನಾನು ಯಾವುದೇ ರೈತರಿಂದ 10 ರೂಪಾಯಿ ಪಡೆದಿಲ್ಲ. ಹಣ ಪಡೆದಿರುವುದು ಸಾಬೀತು ಮಾಡಿದರೆ ಇಂದೆ ನನ್ನ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಇನ್ನೂ ಎರಡನೇ ಹರಾಜಿನಲ್ಲಿ ಬೆಲೆ ಕಡಿಮೆ ಆಗುತ್ತಿರುವ ಬಗ್ಗೆ ಇಂದು ಗಮನಕ್ಕೆ ತಂದಿದ್ದು, ಅದನ್ನು ಸರಿಪಡಿಸುತ್ತೇವೆ. ಇನ್ನೂ ಮನೆಗಳ ಅನುದಾನಕ್ಕೆ ಎರಡು ತಿಂಗಳ ಹಿಂದೆಯೇ ಕೇಂದ್ರಕ್ಕೆ ದಾಖಲೆ ಸಲ್ಲಿಸಿದ್ದು, ಈ ಬಗ್ಗೆ ಮತ್ತಷ್ಟು ಒತ್ತಡ ತರುವ ಪ್ರಯತ್ನ ಮಾಡಲಾಗುವುದು. ಇನ್ನೂ ಭೀಚಿಂಗ್ ಪೌಂಡರ್ ಸೇರಿ ಅನೇಕ ಸೌಲಭ್ಯಗಳಲ್ಲಿ ನನ್ನ ಹಂತದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಬಗೆರಿಸಲಾಗುವುದು. ಉಳಿದದ್ದು ಇಲಾಖಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ರೇಷ್ಮೆ ಇಲಾಖೆಯಿಂದ ಜಂಟಿ ನಿರ್ದೇಶಕರಾದ ಪ್ರತಿಮಾ, ಮೈಸೂರು ಮಾರುಕಟ್ಟೆಯ ಏಡಿ ಸೋಮಣ್ಣ ಸ್ಥಳದಲ್ಲಿ ಹಾಜರಿದ್ದರು.
ಗವಿಗೌಡ, ಕುಮಾರ್,ಈರಣಯ್ಯ ಕೆ.ಆರ್.ನಗರ, ನಟರಾಜು ಕೆ.ಆರ್.ನಗರ, ಕಾಳೇಗೌಡ, ಗೋವಿಂದಸ್ವಾಮಿ ಮೈಸೂರು ಮುಂತಾದವರು ಹಾಜರಿದ್ದರು.