ವಸತಿ ನಿಲಯದ ಸ್ವಚ್ಚತೆ ಕಾಪಾಡಲು ಸಂಸದರ ಸಲಹೆ
ಕೋಲಾರ,ಸೆ,೨೧-ನಗರದ ಸರ್‌ಎಂವಿ ಕ್ರೀಡಾಂಗಣದ ಆವರಣದ ಕ್ರೀಡಾ ವಸತಿ ನಿಲಯಕ್ಕೆ ನಿಲಯಕ್ಕೆ ಸಂಸದ ಎಂ.ಮಲ್ಲೇಶ್ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ರೀಡಾ ವಸತಿ ನಿಲಯದ ಪ್ರತಿಯೊಂದು ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಮಲ್ಲೇಶ್ ಬಾಬು ಕ್ರೀಡಾ ವಸತಿ ನಿಲಯದ ಭೋಜನ ಕೊಠಡಿಯಲ್ಲಿ ಇದ್ದ ಕಸವನ್ನು ಕಂಡು ಸಿಬ್ಬಂದಿಗಳಿಗೆ ಸ್ವಚ್ಛತೆಯನ್ನು ಮಾಡದೆ, ಇಲ್ಲಿಯೇ ಬಿಟ್ಟಿರುವುದೇಕೆ ಎಂದು ಸಿಬ್ಬಂದಿಯನ್ನು ತರಾಟೆಗೆ ಕೊಂಡರು.
ಪ್ರತಿ ದಿನದ ಮೆನು ಪ್ರಕಾರ ತಿಂಡಿ ಊಟಗಳನ್ನು ಕೊಡಲಾಗುತ್ತಿದ್ದೇಯೇ ? ಇದೇನಿದು ೨೦ ಗ್ರಾಂ-೩೦ ಗ್ರಾಂ ಕಾಳುಗಳ ಪಲ್ಯವಿದೆ ಕನಿಷ್ಟ ೧೦೦ ಗ್ರಾಮ್ ಅದರೂ ಇರ ಬೇಕಾಲ್ಲವೇ ? ಇದು ನಾಮಾಕವಸ್ಥೆಯಾಗಿದೆ ಅಷ್ಟೆ ಎಂದು ಅಸಮಾಧನ ಪಡೆಸಿದರು,
ಉಸ್ತುವಾರಿ ಸಚಿವರು ಬಾಲಕಿಯರ ಕ್ರೀಡಾ ವಸತಿ ನಿಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನಂತರ ಮತ್ತೊಮ್ಮೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ ಇದೇ ಅವ್ಯವಸ್ಥೆಗಳು ಇದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಮೊದಲು ವಿದ್ಯಾರ್ಥಿ ನಿಲಯವನ್ನು ಸ್ವಚ್ಚವಾಗಿಟ್ಟುಕೊಳ್ಳಿ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳ ಕೊಠಡಿಗಳನ್ನು ಪರಿಶೀಲಿಸಿ ಕೊಠಡಿಗಳಲ್ಲಿ ಕಸ, ಹಾಸಿಗೆಗಳನ್ನು ಸ್ವಚ್ಚ ರೀತಿ ಇಟ್ಟು ಕೊಳ್ಳದೆ ಇರುವುದು ಕಂಡು ಸ್ವಚ್ಚ ಇಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಶಿಸ್ತು ಬದ್ದತೆ ತಿಳಿಸಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.
ಕ್ರೀಡಾ ವಸತಿ ನಿಲಯದ ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಪಟ್ಟಿ ಮಾಡಿ ನೀಡಿದರೆ, ಜ.೨೬ರ ಗಣರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಟ್ರಾಕ್‌ಷೂ ಕೊಡಿಸುವುದಾಗಿ ಭರವಸೆ ನೀಡಿದರು.
ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ, ಕ್ರೀಡಾ ವಸತಿ ನಿಲಯದ ತರಬೇತಿದಾರ ವೆಂಕಟೇಶ್ ಮುಂತಾದವರು ಇದ್ದರು.