ರೈಲ್ವೇ ನಿಲ್ದಾಣ ಅಭಿವೃದ್ದಿಗೆ ಸಂಸದರ ಮನವಿ
ಕೋಲಾರ,ಸೆ,೨೧-ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿರುವ ಸಂಸದ ಮಲ್ಲೇಶ್ ಬಾಬು ಅವರು ಕೋಲಾರ ಜಿಲ್ಲೆಯ ರೈಲ್ವೇ ಅಭಿವೃದ್ದಿ ಕಾಮಗಾರಿಗಳ ಕುರಿತು ಮನವಿ ಮಾಡಿಕೊಂಡರು.
ಬೆಂಗಳೂರಿನ ಕೇಂದ್ರ ರೈಲ್ವೆ ಕಛೇರಿಗೆ ಇತ್ತೀಚೆಗೆ ಭೇಟಿ ನೀಡಿ ಮನವಿಸಲ್ಲಿಸಿರುವ ಸಂಸದ ಮಲ್ಲೇಶ್ ಬಾಬು ಹಲವು ರೈಲ್ವೇ ಯೋಜನೆಗಳ ಅಭಿವೃದ್ದಿ ಕುರಿತು ಮನವಿ ಮಾಡಿಕೊಂಡಿದ್ದಾರೆ. ಸೌತ್ ವೆಸ್ಟರ್ನ್ ರೈಲ್ವೇ ಇಲಾಖೆ ಆಡಳಿತಾಧಿಕಾರಿಗಳು, ವಿಭಾಗೀಯ ರೈಲ್ವೆ ವ್ಯವಸ್ಥಾಪಕರನ್ನು ಖುದ್ದು ಭೇಟಿ ಮಾಡಿರುವ ಸಂಸದ ಮಲ್ಲೇಶ್ ಬಾಬು ಜಿಲ್ಲೆಯ ಹಲವು ಪ್ಲಾಟ್ ಫಾರಂ ಹಾಗೂ ರೈಲ್ವೇ ನಿಲ್ದಾಣಗಳ ಮೇಲ್ದಾರ್ಜೆ ಅಭಿವೃದ್ದಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಹತ್ತಕ್ಕೂ ಹೆಚ್ಚು ರೈಲ್ವೇ ಗೇಟ್ ಅಭಿವೃದ್ಧಿ ಹಾಗೂ ಅಂಡರ್ ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದಾರೆ. ಮಾಲೂರು ತಾಲ್ಲೂಕಿನ ಮರಲಹಳ್ಳಿ ಫ್ಲಾಟ್ ಫಾರಂ ನಿರ್ಮಾಣ ಹಾಗೂ ಕೋಲಾರ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದ ಸಮೀಪ ರೈಲು ನಿಲ್ದಾಣ ಮಾಡುವಂತೆ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಲ್ಲದೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿವೀಕ್ಷಣೆಗೆ ತಂಡ ರಚನೆ ಮಾಡಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವಂತೆ ಮನವಿ ಮಾಡಿದ್ದು, ಇದಕ್ಕೆ ರೈಲ್ವೇ ಇಲಾಖೆ ಅಧಿಕಾರಿಗಳ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಲ್ಲೇಶ ಬಾಬು ತಿಳಿಸಿದರು.