ರುಮಾನ ಕೌಸರ್‌ಗೆ ಏಕಲವ್ಯ ಪ್ರಶಸ್ತಿ ನೀಡಲು ಒತ್ತಾಯ
ಕೋಲಾರ,ಸೆ.೨೧- ಅಂತರಾಷ್ಟ್ರೀಯ ಕರಾಟೆಪಟು ನಗರದ ನಿವಾಸಿ ರುಮಾನ ಕೌಸರ್ ಕೋಂ ಕೌಸರ್ ಬೇಗ್ ಏಕಲವ್ಯ ಪ್ರಶಸ್ತಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರುಮಾನ ಕೌಸರ್ ಹಲವಾರು ಪ್ರಥಮ ದರ್ಜೆ ಪ್ರಶಸ್ತಿಗಳನ್ನು ಪಡೆದಿದ್ದು, ಕರಾಟೆಯಲ್ಲಿ ೫೦ ಪ್ರಶಸ್ತಿ ಪತ್ರಗಳು, ೫೨ ಚಿನ್ನದ ಪದಕಗಳು, ೧೫ ಬೆಳ್ಳಿ ಪದಕಗಳು. ೧೦ ಕಂಚಿನ ಪದಕಗಳು, ಮತ್ತು ೧೦೦ ಟ್ರೋಪಿಗಳನ್ನು ಪಡೆದಿದ್ದು, ಹಾಗೂ ರಾಷ್ಟ್ರಮಟ್ಟದಲ್ಲಿ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಕರಾಟೆ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿರುತ್ತಾರೆ. ಹಾಗೂ ಕೋಲಾರ ಜಿಲ್ಲೆಗೆ ಒಳಪಡುವ ಎಲ್ಲಾ ತಾಲ್ಲೂಕಿನ ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಸುಮಾರು ೩೫೦೦ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಪೊಲೀಸ್‌ರಿಗೆ ಕರಾಟೆ ಆತ್ಮ ರಕ್ಷಣೆ ತರಬೇತಿಯನ್ನು ನೀಡುತ್ತಿದ್ದಾರೆ.
೨೦೨೩-೨೪ ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಲೇಷ್ಯಾದ ಓಕಿನೋವಾ ಗೊಜೋ ರಿಯೋ ಇಫೋ ಕ್ರೀಡಾಂಗಣದಲ್ಲಿ ನಡೆದ ೨೦ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಕಟಾ ವಿಭಾಗದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಕೋಲಾರದ ನಿವಾಸಿ ರುಮಾನಾ ಕೌಸರ್ ಬೇಗ್ ಚಿನ್ನದ ಪದಕ ಸಹ ಪಡೆದಿರುತ್ತಾರೆ.
ಇವರ ಸಾಧನೆಯನ್ನು ಪರಿಗಣಿಸಿ ಏಕಲವ್ಯ ಪ್ರಶಸ್ತಿಯನ್ನು ನೀಡುವಂತೆ ಸಾರ್ವಜನಿಕರು ಒತ್ತಾಯವಾಗಿದೆ.