ಮಕ್ಕಳು ದೇಶ ಸೇವೆಗೆ ಮುಂದಾಗಿ-ಶ್ರೀಕೃಷ್ಣ
ಕೋಲಾರ.ಸೆ.೨೧-ಮಕ್ಕಳು ಓದಿ ವಿದ್ಯಾವಂತರಾದರೆ ಸಾಲದು, ದೇಶದ ಸತ್ಪ್ರಜೆಗಳಾಗಿ ಈ ದೇಶದ ಸೇವೆ ಮಾಡಬೇಕು ಎಂದು ಮದರ್ ತೆರೇಸಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಶ್ರೀಕೃಷ್ಣ ಅಭಿಪ್ರಾಯಪಟ್ಟರು.
ನಗರದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಮಲಾ ಮಹಡಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಈ ನಿಟ್ಟಿನಲ್ಲಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಅಗತ್ಯ ಸೇವೆ ಸಲ್ಲಿಸಬೇಕೆಂದು ಗುರುಗಳಿಗೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ ಮಾತನಾಡಿ, ಮಕ್ಕಳು ಈ ದೇಶದ ಆಸ್ತಿ, ಅವರಲ್ಲಿ ಹುದುಗಿರುವ ಸುಪ್ತವಾದ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳನ್ನು ಹಾಗೂ ಇನ್ನು ಹತ್ತಾರು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದ್ದು, ಶಿಕ್ಷಕರು ಅವುಗಳ ಅನುಷ್ಠಾನಕ್ಕೆ ಕಾಯಾ, ವಾಚ, ಮನಸ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅನುದಾನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಾಲ್ಗುಣ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಜೈದೀಪ್, ಗ್ರೇಸ್ ಜಯಂತಿ ಶಾಲೆಯ ಕಾರ್ಯದರ್ಶಿ ಪ್ರಭಾಕರ್, ರವಿ ಇಂಟರ್ನ್ಯಾಷನಲ್ ಶಾಲೆಯ ಆಡಳಿತ ಅಧಿಕಾರಿ ನರೇಶ್‌ಬಾಬು, ಬಾಬಾ ಶಾಲೆಯ ವೇಣು ಸುಂದರ್‌ಗೌಡ, ಯಾದವ್ ಶಾಲೆಯ ಸುನೀತಾ, ಸುಭಾಷ್ ಶಾಲೆಯ ಜಿ.ಎನ್.ವೇಣುಗೋಪಾಲ್, ಜೆ.ಕೆ ಇಂಟರ್‌ನ್ಯಾಷನಲ್ ಶಾಲೆಯ ಅಕ್ಮಲ್, ಮುಖ್ಯ ಶಿಕ್ಷಕ ಕೋಟೇಶ್ವರರಾವ್, ಸರೋಜಮ್ಮ, ರಾಮಪ್ಪ, ಪ್ರಭಾವತಿ, ಕೆ.ಆರ್.ಸರಸ್ವತಿ, ಶಿಕ್ಷಣ ಸಂಯೋಜಕಿ ಲೇಖಾ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಟಿ.ಎಂ.ಸುರೇಶ್ ಕುಮಾರ್, ಕಮಲಾ ಮಹಡಿ ಕ್ಲಸ್ಟರ್‌ನ ಸುಮಾರು ೪೦ ಶಾಲೆಗಳಿಂದ ಸಾವಿರಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಪ್ರದರ್ಶನವನ್ನು ಅನಾವರಣಗೊಳಿಸಿದರು.