ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅನ್ಯಾಯ
ಕೋಲಾರ,ಸೆ.೨೧-ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತನ್ನ ಮಗನಿಗೆ ಅನ್ಯಾಯವಾಗಿದೆ. ಅಧಿಕೃತ ತೀರ್ಪುಗಾರರನ್ನು ನೇಮಿಸಿ ಮರು ಪಂದ್ಯವನ್ನು ಆಯೋಜಿಸಿ ಕರಾಟೆಪಟು ಸಚಿನ್ ಎಂ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪೋಷಕರಾದ ಗಾಂಧಿನಗರದ ಮಂಜುನಾಥ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ನೀಡಿದ್ದಾರೆ. ಒತ್ತಾಯಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಅಂತಿಮ ಸ್ಪರ್ಧೆಯಲ್ಲಿ ಸಚಿನ್ ಎಂ. ಮತ್ತು ಶ್ರವಣ್ ಕುಮಾರ್ ಎಂ ಅವರ ನಡುವೆ ೫೪ ಕೆ.ಜಿ.ವಿಭಾಗದಲ್ಲಿ ಪಂದ್ಯಾವಳಿ ನಡೆದಿದ್ದು, ಮುಖ್ಯ ತೀರ್ಪುಗಾರರಾಗಿ ಶ್ರವಣ್ ಕುಮಾರ್ ಎಂ ಅವರ ತಂದೆ ಮಾಲೂರು ಮಂಜುನಾಥ್ ಹಾಗೂ ಕೆನಡಿ ತೀರ್ಪುಗಾರರಾಗಿ ಭರತ್ ಪಂದ್ಯಾವಳಿಯ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಂಡು ಮಗನ ಪರವಾಗಿ ಹೆಚ್ಚಿನ ಅಂಕಗಳನ್ನು ನೀಡುವ ಮೂಲಕ ಪ್ರತಿಸ್ಪರ್ಧಿ ಸಚಿನ್ ಎಂ ವಿರುದ್ಧ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.
ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ ವಿಡಿಯೋ ತುಣುಕುಗಳನ್ನು ಪರಿಶೀಲಿಸಿ ಅರ್ಹ ಕರಾಟೆ ತೀರ್ಪುಗಾರರಿಂದ ಅಭಿಪ್ರಾಯ ಪಡೆದು ನಮಗೆ ನ್ಯಾಯವನ್ನು ಒದಗಿಸಿಕೊಡಬೇಕು. ಮುಂದಿನ ದಿನಗಳಲ್ಲಿ ತಾರತಮ್ಯವಿಲ್ಲದ ತೀರ್ಪು ನೀಡುವಂತಹ ಅಧಿಕೃತ ತೀರ್ಪುಗಾರರನ್ನು ನೇಮಿಸಿ ಮರು ಪಂದ್ಯವನ್ನು ಆಯೋಜಿಸಿ ಕ್ರೀಡಾಪಟುವಿಗೆ ನ್ಯಾಯ ಒದಗಿಸಿಕೊಡಬೆಕೆಂದು ಗಾಂಧಿನಗರದ ಮಾಹಿತಿ ಮಂಜುನಾಥ್ ಒತ್ತಾಯಿಸಿದ್ದಾರೆ.