ಚೊಂಬುಗಳ ಸರದಾರ ಕಾಂಗ್ರೆಸ್: ಚೊಂಬಿನ ಜಾಹಿರಾತಿಗೆ ಸುರೇಶ್ ಕುಮಾರ್ ಟಾಂಗ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.20-ಕಾಂಗ್ರೆಸ್ ಸರ್ಕಾರವೇ ಚೊಂಬುಗಳ ಸರದಾರಎಂದು ಸಚಿವ ಸುರೇಶ್‍ಕುಮಾರ್‍ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರಕೊಟ್ಟಿರುವ ಚೊಂಬಿನ ಜಾಹಿರಾತು ಸಂಬಂಧಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆಅವರು ಮಾತನಾಡಿ,ಸಿಎಂಗೆ ಚೊಂಬು ಕೊಡಲು ಡಿಸಿಎಂ ಕಾಯ್ತಿದ್ದಾರೆ, ಡಿಸಿಎಂಗೆ ಚೊಂಬು ಕೊಡಲು ಸಿಎಂ ಕಾಯ್ತಿದ್ದಾರೆ, ಇವರಿಬ್ಬರಿಗೂ ಚೊಂಬು ಕೊಡಲುಜನಕಾಯ್ತಿದ್ದಾರೆಎಂದು ವ್ಯಂಗ್ಯ ಮಾಡಿದರು.
ಚೊಂಬುಗಳ ಸರದಾರಎಂದರೆಅದುಕಾಂಗ್ರೆಸ್, ಕಳೆದ 10 ತಿಂಗಳುಗಳಿಂದ ರಾಜ್ಯದಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆ ಮಾಡದಿರುವುದು ನಾಗರಿಕರಿಗೆ ನೀವು ಕೊಟ್ಟಿರುವ ಚೊಂಬು ಅಲ್ಲವೇ? ನಿರುದ್ಯೋಗಿಯುವಕರಿಗೆರೂ. 2000 ಕೊಡುತ್ತೇವೆಂದು ಭರವಸೆ ನೀಡಿ ಮತ ಪಡೆದು ಕಳೆದ 10 ತಿಂಗಳಲ್ಲಿ ಒಬ್ಬರಿಗೂ ನಿರುದ್ಯೋಗಭತ್ಯೆ ನೀಡದೆ ಚೊಂಬು ನೀಡಿರುವುದು ನೀವಲ್ಲವೇ? ಹಿಂದಿನ ಬಿಜೆಪಿ ಸರ್ಕಾರರಾಜ್ಯದ ಪ್ರತಿ ಸಣ್ಣ ಮತ್ತುಅತಿ ಸಣ್ಣರೈತರಿಗೆ ವರ್ಷಕ್ಕೆ ನಾಲ್ಕು ಸಾವಿರರೂಪಾಯಿ ಪ್ರಧಾನಮಂತ್ರಿಕಿಸಾನ್ ಸನ್ಮಾನಯೋಜನೆ ಅಡಿ ಹಣ ನೀಡಿತನ್ನ ಕಾಳಜಿ ತೋರಿತ್ತು. ಏನೂ ಕಾರಣ ನೀಡದೆ ಅದನ್ನು ನಿಲ್ಲಿಸಿ ಈ ಅನ್ನದಾತರಿಗೆ ಚೊಂಬು ನೀಡಿರುವುದು ನೀವೇ ಅಲ್ಲವೇ?
ಹೀಗೆ ದೇಶದ ಚೊಂಬುಗಳ ಸರದಾರ ನೀವೇ ಆಗಿರುವಾಗ ಬೇರೆಯವರಿಗೆಯಾಕೆ ಆ ಪ್ರಶಸ್ತಿ ಎಂದುಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆನೀಡಿದಅವರು, ಈ ಕೊಲೆ ನಿಜಕ್ಕೂದುರಂತದಘಟನೆ ನಾನು ಸಿಸಿಟಿವಿಯನ್ನ ನೋಡಿದ್ದೇನೆ, ಚಾಕು ಇರಿದಾಗ ಈ ಹುಡುಗಿಯ ನೋವು ಹೇಗಿರಬಹುದು..?ಅದನ್ನ ನೋಡಿದತಂದೆ ಮತ್ತುತಾಯಿಗೆ ಹೇಗೆ ಸಂಕಟಅಗಿರಬಹುದು,
ಯಾವದಾಕ್ಷಿಣ್ಯ ಇಟ್ಟುಕೊಳ್ಳದೇ ಮುಕ್ತವಾಗಿ ವಿಚಾರಣೆ ನಡೆಸ ಬೇಕು, ಒಂದೊಂದುಜೀವವೂಕೂಡಅಮೂಲ್ಯಈರೀತಿಯ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು, ಸರ್ಕಾರ ಈ ಬಗ್ಗೆ ಕಟ್ಟು ನಿಟ್ಟಿನಕ್ರಮಕ್ಕೆ ಮುಂದಾಗಬೇಕುಎಂದು ಒತ್ತಾಯಿಸಿದರು.
ಬಿಜೆಪಿ ಅಭ್ಯರ್ಥಿ ಬಾಲರಾಜ್‍ಗೆಇಲ್ಲಿ ಒಳ್ಳೆ ಬೆಂಬಲ ಇದೆ, ಬಾಲರಾಜ್‍ಓರ್ವ ಸರಳ ಮತ್ತು ಸಜ್ಜನರಾಜಕಾರಣಿ, ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲುವುದುಖಚಿತ, ಮೋದಿ ಆಡಳಿತವನ್ನ ಜನ ಬಯಸಿದ್ದಾರೆಹಾಗಾಗಿ ಈ ಬಾರಿಯು ಬಾಲರಾಜ್ ಗೆಲುವು ದಾಖಲಿಸಲಿದ್ದಾರೆಎಂದು ವಿಶ್ವಾಸ ವ್ಯಕ್ತಪಡಿಸಿದರು.