ನೇಹಾ ಹತ್ಯೆ ಕೇಸ್: ಜಿಗಜಿಣಗಿ ತೀವ್ರ ಖಂಡನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.20:ಹುಬ್ಬಳ್ಳಿಯಲ್ಲಿ ಕಾಪೆರ್Çೀರೇಟರ್ ಪುತ್ರಿ ನೇಹಾ ಹಿರೇಮಠ ಎಂಬ ಮುಗ್ಧ ಬಾಲಕಿಯನ್ನು ಯುವಕನೊಬ್ಬ ಕಾಲೇಜು ಆವರಣದಲ್ಲಿ ಹಾಡ ಹಗಲೆ ಅಮಾನವೀಯವಾಗಿ ಹತ್ಯೆ ಮಾಡಿರುವುದನ್ನು ಸಂಸದ ರಮೇಶ ಜಿಗಜಿಣಗಿ ತೀವ್ರವಾಗಿ ಖಂಡಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವಿಶೇಷವಾಗಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಹತ್ಯೆ, ಸ್ಪೋಟದಂತಹ ಅಪರಾಧಿಕ ಕೃತ್ಯಗಳು ಹೆಚ್ಚಾಗಿದ್ದು, ದುಷ್ಕರ್ಮಿಗಳು, ಕೊಲೆಗಡುಕರಿಗೆ ಕಾನೂನಿನ ಯಾವುದೇ ಭಯವಿಲ್ಲದಂತಾಗಿದೆ. ನೇಹಾ ಬಾಲಕಿಯ ಕೊಲೆಗಾರನ ವಿರುದ್ಧ ಪೆÇಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಠಿಣ ಶಿಕ್ಷೆ ವಿಧಿಸಿ, ಇಂತಹ ದುಷ್ಠರಿಗೆ ಎಚ್ಚರಿಕೆಯ ಗಂಟೆಯಾಗುವಂತೆ ಕ್ರಮಕ್ಕೆ ಮುಂದಾಗಬೇಕು ಅವರು ಒತ್ತಾಯಿಸಿದ್ದಾರೆ.