ಇಂಚಗೇರಿ ಮಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಭೇಟಿ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.20:ವಿಜಯಪುರ ಲೋಕಸಭೆ ಎಸ್.ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಶುಕ್ರವಾರ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಭೇಟಿ ನೀಡಿ, ಸದ್ಗುರುಗಳಾದ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಾದ ಪಡೆದರು.
‘ನಿಮಗೆ ಒಳ್ಳೆಯದಾಗುತ್ತದೆ’ ಎನ್ನುವ ‘ಶುಭಾಶೀರ್ವಾದ ಆಲಗೂರ ಅವರಿಗೆ ದೊರೆತಿದೆ.
ಹಿರಿಯ ಮುಖಂಡರಾದ ಡಿ.ಎಲ್. ಚವ್ಹಾಣ, ಕಾಳು ಬೆಳ್ಳುಂಡಗಿ, ಅಶೋಕ ಬೆಳ್ಳುಂಡಗಿ, ಮಲ್ಲಣ್ಣ ಸಕ್ರಿ (ಸಾಲಿ), ಕೆ.ಎಂ.ಅರವತ್ತಿ, ರೇವಣಸಿದ್ದ ಬೂದಿಹಾಳ, ಡಾ. ರವಿದಾಸ ಜಾಧವ್, ಶ್ರೀಮಠದ ಹಿರಿಯರಾದ ಶಂಕ್ರಪ್ಪ ಅಣ್ಣಾ ಕೌಜಲಗಿ, ಮಹದೇವ ಮುರುಗೋಡ, ಗ್ರಾಮದ ಹಿರಿಯರಾದ ಭೀಮರಾಯಗೌಡ ಬಿರಾದಾರ, ಸಿದ್ದರಾಯಗೌಡ ಬಿರಾದಾರ, ಕಾಶಿನಾಥ ಗುಡ್ಡದ, ಮೌಲಾಲಿ ವಾಲಿಕಾರ, ಶಿವರಾಯ ಬೆಳ್ಳೆನವರ, ರೇವಣಸಿದ್ದ ಮಾನೆ, ರವಿ ಚವ್ಹಾಣ ಅನೇಕರಿದ್ದರು