ನೇಹಾ ಹತ್ಯೆ ಖಂಡನೀಯ: ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ
ಕೊಲ್ಹಾರ:ಏ.20: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆ ಅತ್ಯಂತ ಖಂಡನೀಯ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಹತ್ತಿರ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಅವರು ಕಾಂಗ್ರೆಸ ಸರ್ಕಾರ ಮುಸ್ಲಿಂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಯಾಗಿದೆ, ಮತಾಂಧರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಈ ಘಟನೆಯಲ್ಲಿ ಲವ್ ಜಿಹಾದ್ ಛಾಯೆ ಇಲ್ಲಿ ಸ್ಪಷ್ಟವಾಗಿ ಎದ್ದುಕಾಣುತ್ತಿದ್ದು ನೇಹಾಳನ್ನ ಹಾಡುಹಗಲೇ ಕೊಲೆ ಮಾಡಿರುವ ಆರೋಪಿ ಫಯಾಜನನ್ನ ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭಲ್ಲಿ ಸಿ.ಎಂ ಗಣಕುಮಾರ, ಈರಯ್ಯ ಮಠಪತಿ, ಕಲ್ಲಪ್ಪ ಗಿಡ್ಡಪ್ಪಗೋಳ, ಮಾಹಾಂತಯ್ಯ ಹಿರೇಮಠ, ವಿಜಯ ಬಾಟಿ, ಮಲ್ಲಯ್ಯ ಗಣಕುಮಾರ, ಪ.ಪಂ ಸದಸ್ಯ ಬಾಬು ಬಜಂತ್ರಿ, ಡಾ.ದುಂಡಪ್ಪ ಕೊಠಾರಿ, ಮಲ್ಲಪ್ಪ ಬಾಟಿ ಹಾಗೂ ಇತರರು ಇದ್ದರು.