ಸಾತ್ವಿಕನ ರಕ್ಷಿಸಿದ ತಾಲೂಕು ಅಧಿಕಾರಿಗಳಿಗೆ ಬಂಥನಾಳ ಶ್ರೀಗಳಿಂದ ಸನ್ಮಾನ
ಇಂಡಿ:ಏ.20:ಎಲ್ಲ ಇಲಾಖೆಯ ಸಹಕಾರದೊಂದಿಗೆ ಪರಿಶ್ರಮ ಪಟ್ಟರೆ ಸರಕಾರಿ ಸಂಸ್ಥೆಗಳಲ್ಲಿಯೂ ಉತ್ತಮ ಸಾಧನೆ ಮಾಡಬಹುದು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ತಾಲೂಕಿನ ಸುಕ್ಷೇತ್ರ ಬಂಥನಾಳದಲ್ಲಿ ಶ್ರೀ ವೃಷಭಲಿಂಗೇಶ್ವರ ಸಂಸ್ಥಾನ ಮಠದ ವತಿಯಿಂದ ಈಚೆಗೆ ಲಚ್ಯಾಣ ಗ್ರಾಮದ ಜಮೀನಿನಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಬಾಲಕ ಸಾತ್ವಿಕ ಮುಜಗೊಂಡನ ರಕ್ಷಣೆಗೆ ಶ್ರಮಿಸಿದ ತಾಲೂಕು ಮಟ್ಟದ ಅಧಿಕಾರಿಗಳನ್ನು ಬಂಥನಾಳ ಹಾಗೂ ಲಚ್ಯಾಣ ಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಾ. ಶ್ರೀ ವೃಷಭಲಿಂಗೇಶ್ವರ ಶ್ರೀಗಳು ಮಾತನಾಡಿ ಭರತ ಭೂಮಿ ಸಾಧು ಸಂತರ ಬಿಡು, ಅನಾದಿ ಕಾಲದಿಂದ ಆಯಾ ಕಾಲಕ್ಕೆ ಶರಣರು ತಮ್ಮ ಬದುಕಿನಲ್ಲಿ ಕಠಿಣ ಆಧ್ಯಾತ್ಮಿಕ ಸಾಧನೆಗಳ ಮೂಲಕ ಭಕ್ತರ ಸಂಕಷ್ಟ ದೂರ ಮಾಡಿ ಅವರ ಬದುಕನ್ನು ಸಮಾಜದ ಒಳತಿಗಾಗಿ ಅರ್ಪಿಸಿಕೊಂಡ ಪರಿಣಾಮ ಸಿದ್ದಲಿಂಗ ಪೂಜ್ಯರಂತಹ ಶ್ರೀಗಳ ಪವಾಡಗಳನ್ನು ನೆನೆಸಿ ಅವರನ್ನು ಆರಾಧಿಸುತ್ತಿದ್ದೇವೆ ಅಂತಹ ಪವಾಡಗಳಲ್ಲಿ ಸಾತ್ವಿಕ ಪವಾಡ ಒಂದು ಎಂದರು.
ತುಂಗಳ ಮಾತೋಶ್ರೀ ಅನುಸೂಯಾದೇವಿ ಅಮ್ಮನವರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ವೈದ್ಯ ಡಾ|| ವಿಪುಲ್ ಕೋಳೆಕರ , ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ ಮಾತನಾಡಿದರು.
ಇಂಡಿ ತಹಶೀಲ್ದಾರ ಮಂಜುಳಾ ನಾಯಕ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಾಲೂಕು ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ, ಡಾ|| ವಿಪುಲ ಕೋಳೆಕರ, ಡಾ|| ಚೈತ್ರಾ ಬಜಂತ್ರಿ, ಸಿಡಿಪಿಯು, ಅಗ್ನಿಶಾಮಕ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.