ಮತದಾನ ಮಹತ್ವದ ಹಕ್ಕಾಗಿದೆ:ಪ್ರಾಂಶುಪಾಲ ದಂಡಿಗಿಮಠ
ಸೈದಾಪುರ:ಏ.20:ಮತದಾನ ಸಂವಿಧಾನ ನಮಗೆ ನೀಡಿದ ಮಹತ್ವ ಹಕ್ಕಾಗಿದ್ದೂ ಅದನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಚಲಾವಣೆ ಮಾಡಬೇಕು ಎಂದು ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಮಹತ್ವದ ಜವಬ್ದಾರಿಯನ್ನು ಹೊಂದಿದ ಅವಕಾಶವಾಗಿದೆ. ಂiÀiವುದೆ ಆಶೆ ಅಮಿಷಗಳಿಗೆ ಒಳಗಾಗದೆ. ನ್ಯಾಯಯುತ ಹಾಗೂ ಮುಕ್ತವಾಗಿ ಮತದಾನ ಮಾಡಬೇಕು. ಅದನ್ನು ಹಬ್ಬದ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಆಸಕ್ತಿಯಿಂದ ಭಾಗವಹಿಸಬೇಕು. ಅಲ್ಲದೆ ಪ್ರಜ್ಞಾವಂತರು ಹೆಚ್ಚಿನ ಮತದಾನಕ್ಕಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಾಪುರ, ಡಿ.ಎಲ್.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು.