ನಾಮಪತ್ರ ಸಲ್ಲಿಕೆ ಕೊನೆಯ ದಿನದಂದು11 ಅಭ್ಯರ್ಥಿಗಳಿಂದ 12 ನಾಮಪತ್ರಗಳು ಸಲ್ಲಿಕೆ
ಕಲಬುರಗಿ:ಏ.19:ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಶುಕ್ರವಾರದಂದು 11 ಅಭ್ಯರ್ಥಿಗಳಿಂದ 12 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಸ್ವತಂತ್ರ ಅಭ್ಯರ್ಥಿಯಾಗಿ ವಿಜಯಕುಮಾರ ಭೀಮಶಾ 1 ನಾಮಪತ್ರ, ಸ್ವತಂತ್ರ ಅಭ್ಯರ್ಥಿಯಾಗಿ ಶರಣಬಸಪ್ಪ ಪೀರಪ್ಪ ಅವರು 1 ನಾಮಪತ್ರ, ಸ್ವತಂತ್ರ ಅಭ್ಯರ್ಥಿಯಾಗಿ ಶರಣಪ್ಪ ಮರಲಿಂಗಪ್ಪ ಅವರು 1 ನಾಮಪತ್ರ, ಕರ್ನಾಟಕ ರಾಷ್ಟ್ರ ಸಮಿತಿಯ ಪಕ್ಷದ ಅಭ್ಯರ್ಥಿಯಾಗಿ ವಿಜಯ ಗೋವಿಂದ ಜಾಧವ ಅವರು 1 ನಾಮಪತ್ರ, ಸ್ವತಂತ್ರ ಅಭ್ಯರ್ಥಿಯಾಗಿ ವೆಂಕಟೇಶ್ವರರಾವ್ ಅಮೃತರಾವ್ ಅವರು 1 ನಾಮಪತ್ರ, ಸ್ವತಂತ್ರ ಅಭ್ಯರ್ಥಿಯಾಗಿ ರವೀಂದ್ರ ಕಲ್ಲಯ್ಯ ಸ್ವಾಮಿ ಅವರು 1 ನಾಮಪತ್ರ, ಸ್ವತಂತ್ರ ಅಭ್ಯರ್ಥಿಯಾಗಿ ಜ್ಯೋತಿ ರಮೇಶ ಅವರು 1 ನಾಮಪತ್ರ, ಭಾರತೀಯ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿಯಾಗಿ ಶಂಕರ ಲಿಂಬಾಜಿ ಜಾಧವ ಅವರು 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿಯಾಗಿ ಸುಂದರ ಮೇಘು ಅವರು 1 ನಾಮಪತ್ರ, ಸ್ವತಂತ್ರ ಅಭ್ಯರ್ಥಿಯಾಗಿ ಹುಸೇನಪ್ಪ ಬಂದೆಪ್ಪ ಅವರು 1 ನಾಮಪತ್ರ ಹಾಗೂ ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಶಿವಪುತ್ರ ಮರೆಪ್ಪ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.