ಸಮುದಾಯಭವನ ನಿರ್ಮಾಣಕ್ಕೆ ಮನವಿ
ಕಲಬುರಗಿ,ಏ 19: ಸೇಡಂ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಸಂತ ಕನಕದಾಸರ ಸಮುದಾಯ ಭವನ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವಂತೆ ಹೈದ್ರಾಬಾದ ಕರ್ನಾಟಕ ,ಗೊಂಡ,ರಾಜಗೊಂಡ,ಕಾಡುಕುರುಬ,ಜೇನುಕುರುಬ (ಪಪ) ಸಂಘ ಮನವಿ ಮಾಡಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಸಂಘದ ವಿಭಾಗೀಯ ಕಾರ್ಯದರ್ಶಿ ಶಿವಾಜಿ ಪಟ್ಟಣ ಮನವಿ ಸಲ್ಲಿಸಿದ್ದಾರೆ.