ಶ್ರೇಷ್ಠ ವ್ಯಕ್ತಿಯಾಗಲು ಒಳ್ಳೆಯ ಹವ್ಯಾಸಗಳ ರೂಢಿ ಅವಶ್ಯ: ಜೋಷಿ
ತಾಳಿಕೋಟೆ:ಏ.19: ಒಬ್ಬ ವ್ಯಕ್ತಿ ಶ್ರೇಷ್ಠನಾಗಬೇಕಾದರೆ ಆ ವ್ಯಕ್ತಿಗೆ ಒಳ್ಳೊಳ್ಳೆಯ ಹವ್ಯಾಸಗಳು ಬೇಕು ಹಾಗೂ ಒಳ್ಳೆಯ ಗುಣ ನಡತೆಗಳಿರಬೇಕೆಂದು ಸ್ಥಳೀಯ ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ಸಂತೋಷಭಟ್ ಜೋಷಿ ಅವರು ನುಡಿದರು.
ಗುರುವಾರರಂದು ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರ ನಿವಾಸಕ್ಕೆ ತಮ್ಮ ವೈಧಿಕ ಪ್ರತಿಷ್ಠಾನ ಸಂಘದ ವತಿಯಿಂದ ಪುರೋಹಿತ ಬಳಗದವರು ಆಗಮಿಸಿ ಘೋರ್ಪಡೆ ಅವರ ಮೊಮ್ಮಗಳಾದ ಕುಮಾರಿ ಭವಾನಿ ಘೋರ್ಪಡೆ ಅವಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕಗಳನ್ನು ಪಡೆದಿದ್ದರಿಂದ ಆಕೆಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡುತ್ತಿದ್ದ ಶ್ರೀಗಳು ಒಳ್ಳೆಯ ಹವ್ಯಾಸಗಳೆಂದರೆ ಅರ್ಥಗರ್ಭಿತ ಪುಸ್ತಕಗಳ ಪಠಣೆ ಹಾಗೂ ಮಹನೀರ ಬೋಧನೆಗಳನ್ನು ಕೇಳುವಿಕೆ ಸತ್ಸಾಂಗತ್ಯ, ಧ್ಯಾನಮಾಡುವುದು ಪ್ರಪಂಚಕ್ಕೆ ಒಳ್ಳೆಯದಾಗುವಂತಹ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕೆಂದರು. ಇದು ಅಲ್ಲದೇ ಯಾರಿಗೂ ತೊಂದರೆಯಾಗದಂತೆ ಯಾರನ್ನೂ ನೋಯಿಸದೇ ಇರುವುದು ತಾನೂ ಕೂಡಾ ನೋವನ್ನು ಅನುಭವಸದೇ ಇರುವುದು ಕರ್ತವ್ಯಗಳನ್ನು ಸಕ್ರಮವಾಗಿ ನಿರ್ವಹಿಸುತ್ತಿರುವದು ಸಹನೆ, ಶಾಂತಿ, ವಿವೇಕ, ವೈರಾಗ್ಯ, ತ್ಯಾಗ, ಧಯೆ, ಕರುಣೆ ಮುಂತಾದ ಸದ್ಗುಣಗಳನ್ನು ಅಭಿವೃದ್ದಿಮಾಡಿಕೊಳ್ಳಬೇಕೆಂದು ಹೇಳಿದ ಶ್ರೀಗಳು ಮುಂದಿನ ದಿನಮಾನದಲ್ಲಿ ಹೆಚ್ಚಿನ ಅಂಕ ಪಡೆದು ಕುಮಾರಿ ಭವಾನಿ ಘೋರ್ಪಡೆ ಅವಳು ಊರಿಗೆ ಜಿಲ್ಲೆಗೆ ಕೀರ್ತಿ ತರಲೆಂದು ಆಶಿಸಿ ಆಕೆ ಪಡೆದ ಅಂಕಗಳ ಕುರಿತು ಹರ್ಷ ವ್ಯಕ್ತಪಡಿಸಿದರು.
ಇನ್ನೋರ್ವ ಸಂಘದ ಅಧ್ಯಕ್ಷರಾದ ಶ್ರೀಧರಾಚಾರ್ಯ ಗ್ರಾಂ ಪುರೋಹಿತ ಅವರು ಮಾತನಾಡಿ ನಮ್ಮ ಅಜ್ಜನ ಕಾಲದಿಂದಲೂ ಘೋರ್ಪಡೆ ಅವರ ಮನೆತನದ ಭಗ್ಗೆ ತೀರ ಪರಿಚಯವಿದೆ ಅವರೂ ಕೂಡಾ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿದ್ದಾರೆ ಅವರಂತೆ ಆಕೆಯ ತಂದೆ ತಾಯಿಯವರೂ ಕೂಡಾ ಸದ್ಗುಣಗಳನ್ನು ಹೊಂದಿದ್ದು ಅವರ ಮನೆತನದ ಒಳ್ಳೆಯ ಸಂಸ್ಕಾರವೇ ಕುಮಾರಿ ಭವಾನಿ ಅವಳನ್ನು ಮೇಲಕ್ಕೆತ್ತುತ್ತಾ ಸಾಗಿದೆ ಎಂದರು.
ಈ ಸಮಯದಲ್ಲಿ ಗಿರಿಶಭಟ್ ಜೋಷಿ, ಅಶೋಕಾಚಾರ್ಯ ಜೋಷಿ, ಯಲಗುರದಾಚಾರ್ಯ ಜೋಷಿ, ಸಂಜೀವಾಚಾರ್ಯ, ಪ್ರತೀಕಭಟ್ ಜೋಷಿ, ಶೇಷಾದ್ರಿ ಗ್ರಾಮಪುರೋಹಿತ, ವೆಂಕಟೇಶಾಚಾರ್ಯ ಗ್ರಾಮಪುರೋಹಿತ, ಹಾಗೂ ಜಿ.ಟಿ. ಘೋರ್ಪಡೆ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದರು.