ಶ್ರೀರಾಮನವಮಿ, ಸಿದ್ಧಾರೂಢರ ಜಯಂತಿ ಆಚರಣೆ
ಕಲಬುರಗಿ,ಏ .19: ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ವತಿಯಿಂದ ಸಪ್ತ ನೇಕಾರ ಸಂಘದ ಕಚೇರಿಯಲ್ಲಿ ಶ್ರೀ ರಾಮನವಮಿ ಮತ್ತು ಸದ್ಗುರು ಸಿದ್ಧಾರೂಢರ ಜಯಂತಿ ಆಯೋಜಿಸಲಾಯಿತು.
ಹಿರಿಯ ವಕೀಲ ನಂದ ಕಿಶೋರ್ ಬೂಬ್ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜೇ. ವಿನೋದ ಕುಮಾರ ಸ್ವಾಗತಿಸಿದರು. ಕಾನೂನು ಸೇವಾ ಸಂಸ್ಥೆಯ ಸಂಸ್ಥಾಪಕ ಶಿವಲಿಂಗಪ್ಪಾ ಅಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ನಂದ ಕಿಶೋರ್ ಬೂಬ್,ಶಾಂತಿಲಾಲ ಮಾತನಾಡಿದರು. ನ್ಯಾಯವಾದಿ ತ್ರೀವೇದಿ ವಿಜಯ ಕುಮಾರ ವಂದಿಸಿದರು, ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಭಂಡಾರಿ ರಾಜ ಗೋಪಾಲ, ಸತೀಶ ಜಮಖಂಡಿ ಇತರರು ಉಪಸ್ಥಿತರಿದ್ದರು.