ಮತದಾರ ಜಾಗೃತಿ, ಬೈಕ್ ರ್ಯಾಲಿ
ಕೊಲ್ಹಾರ: ಏ.19:ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮೂಡಿಸಲು ತಾಲೂಕ ಆಡಳಿತ ಮಂಡಳಿ ನೇತೃತ್ವದಲ್ಲಿ ಗುರುವಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ ಎಸ್.ಎಸ್ ನಾಯಕಲಮಠ ರ್ಯಾಲಿಗೆ ಚಾಲನೆ ನೀಡಿದರು.
ಪಟ್ಟಣ ಪಂಚಾಯತ್ ಕಾರ್ಯಾಲಯದಿಂದ ಹೊರಟ ರ್ಯಾಲಿಗೆ ಬಸವೇಶ್ವರ ವೃತ್ತ, ಮಹಾತ್ಮ ಗಾಂಧೀ ವೃತ್ತ, ಅಗಸಿ, ಸಂಗಮೇಶ್ವರ ವೃತ್ತ, ದಿಗಂಬರೇಶ್ವರ ಮಠ, ರಾಣಿ ಚೆನ್ನಮ್ಮ ವೃತ್ತದ ಮೂಲಕ ಪಟ್ಟಣ ಪಂಚಾಯಿತ ಕಾರ್ಯಾಲಯಕ್ಕೆ ಆಗಮಿಸಿತು.
ತಾಲೂಕ ಪಂಚಾಯತ ಅಧಿಕಾರಿ ಗಿರೀಶ ಸಜ್ಜನ ಮತದಾನ ಪ್ರತಿಜ್ಞಾವಿಧಿ ಭೋದಿಸಿದರು.
ಈ ಸಂದರ್ಭದಲ್ಲಿ ಪ ಪಂ ಮುಖ್ಯಾಧಿಕಾರಿ ರವಿಕೀರ್ತಿ, ಉಮೇಶ ಚಲವಾದಿ, ಕೃಷಿ ಅಧಿಕಾರಿ ಎಂ.ಕೆ ಪುರೋಹಿತ, ಶಿರಸ್ತೆದಾರ ಕೃಷ್ಣ ಗುಡೂರ,ಶ್ರೀಶೈಲ ನಾಗೋಡ, ಶ್ರೀಶೈಲ ಗಜಂಡಿಮಠ ಹಾಗೂ ಇನ್ನಿತರರು ಇದ್ದರು.