ಶ್ರೀ ಹರ ಮ್ಯೂಸಿಕ್ ವಲ್ಡ್ ನ ಸಾಮಾಜಿಕ‌ ಕಳಕಳಿಗೆ ಶ್ಲಾಘನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೯; ಸಾಮಾಜಿಕ ಕಳಕಳಿ ಹೊಂದಿರುವ ಶ್ರೀ ಹರ ಮ್ಯೂಸಿಕ್ ವಲ್ಡ್ ಸಂಸ್ಥೆಯು ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರ ವಲಯದಲ್ಲಿ ಮನರಂಜನೆಯ ಕಾರ್ಯಕ್ರಮ ನಡೆಸಿಕೊಡುತ್ತಾ ಅದರಿಂದ ಬಂದಂತಹ ದೇಣಿಗೆ ಹಣವನ್ನು ಬೀದಿ ಬದಿಯ ನಿರ್ಗತಿಕರಿಗೆ, ಬಡಮಕ್ಕಳ ಜೀವನಕ್ಕಾಗಿ ವ್ಯಯಿಸುತ್ತಿದೆ ಎಂದು ಶ್ರೀಹರ ಮ್ಯೂಸಿಕ್ ವರ್ಲ್ಡ್ ಸಂಸ್ಥಾಪಕರು, ಸಂಗೀತ ನಿರ್ದೇಶಕ ಜಿ.ಎಂ.ಸುನೀಲ್‌ಕುಮಾರ್ ತಿಳಿಸಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನ ಕೇಂದ್ರದ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದ ಅಡಿಯಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ರಜೆಯಲ್ಲಿ ಮಕ್ಕಳಿಂದ ಮಕ್ಕಳಿಗಾಗಿ ಮನರಂಜನೆ ವಿಷಯದ ಕುರಿತು ಮಾತನಾಡಿದರು.ಕಳೆದ ೮ವರ್ಷಗಳಿಂದ ನಮ್ಮ ಸಂಸ್ಥೆಯು ದಾವಣಗೆರೆಯಲ್ಲಿ ಸಂಗೀತ ಸೇವೆ ನೀಡುತ್ತಿದೆ. ಕೀಬೋ ರ್ಡ್, ಗಿಟಾರ್, ಹಿಂದುಸ್ತಾನಿ ಸಂಗೀತ, ಡ್ಯಾ ನ್ಸ್, ಆಲ್ಬಮ್ ಸಾಂಗ್ಸ್, ಶಾರ್ಟ್ ಮೂವೀಸ್ ಸೇರಿದಂತೆ ಇತರೆ ಸಂಗೀತ ಸೇವೆ ನೀಡಿದೆ. ಕನ್ನಡ, ತಮಿಳು, ತೆಲುಗು ಕ್ಷೇತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಕೆಎಸ್‌ಎಂ ಮ್ಯೂಸಿಕ್ ಪ್ರೊಡಕ್ಷನ್ ಮತ್ತು ರೆಕಾರ್ಡಿಂಗ್ ಸ್ಟುಡಿಯೋ ಹೊಂದಿದ್ದು, ಸಾಮಾಜಿಕ ಕಳಕಳಿ ಹೊಂದಿರುವ ನಮ್ಮ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ, ಸಂಗೀತ ವಾದ್ಯಗಳ ಶಿಕ್ಷಣ ನೀಡಲಾಗಿದೆ. ಇದರಿಂದ ಬಂದ ಹಣವನ್ನು ಬಡವರು, ನಿರ್ಗತಿಗರ ಜೀವನಕ್ಕಾಗಿ ನೀಡಲಾಗುತ್ತಿದೆ ಎಂದರು.ಈ ವೇಳೆ ಸಿಹೆಚ್‌ಐನ ನಿರ್ದೇಶಕ ಡಾ.ಗುರುಪ್ರಸಾದ್,, ಡಾ. ಮೃತುoಜಯ, ಡಾ. ಕೌಜಲಗಿ, ಡಾ ರೇವಪ್ಪ, ಡಾ. ಮಧು ಪೂಜಾರ್, ಡಾ. ನವೀನ್ ನಾಡಿಗ್, ಡಾ. ಸಚಿನ್ ಬಾತಿ, ಡಾ. ನಾಗಮಣಿ ಅಗರ್ವಾಲ್ ಮತ್ತಿತರರಿದ್ದರು.