ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ
ಸೇಡಂ, ಎ, 19: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ಮತದಾರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ತಾಲೂಕಾ ಸಹಾಯಕ ಚುನಾವಣಾಧಿಕಾರಿ ಆಶಪ್ಪ ಪೂಜಾರಿ ಅವರು ಮತದಾನ ಜಾಗೃತಿ ಕುರಿತು ಮಾತುಗಳಾಡಿದರು. ಈ ವೇಳೆಯಲ್ಲಿ ತಹಸಿಲ್ದಾರ್ ಶಿವಾನಂದ ಮೇತ್ರೆ, ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಇದ್ದರು.