ಅಣವಾರ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವ
ಚಿಂಚೋಳಿ :ಏ.19:ತಾಲೂಕಿನ ಆಣವಾರಗ್ರಾಮದ ಶ್ರೀಮಾರುತೇಶ್ವರ ಮಂದಿರ ಜಾತ್ರಾಮಹೋತ್ಸವದ ಅಂಗವಾಗಿ ಶ್ರೀ ಮಾರುತೇಶ್ವರ ಹಾಗೂ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಏ.19 ರಿಂದ 23ರ ವರೆಗೆ ಜರುಗಲಿದೆ.ಸಂಜೆ 8 ಗಂಟೆಗೆ ಗ್ರಾಮದ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮತ್ತು ಶ್ರೀ ಮಾರುತೇಶ್ವರ ದೇವರಿಗೆ ಐದು ದಿವಸಗಳ ಕಾಲ ಮುಂಜಾನೆ ಮತ್ತು ಸಂಜೆ ಏಕಾದಶರುದ್ರ ಪಾರಾಯಣ, ಮುಂಜಾನೆ ಮತ್ತು ಸಂಜೆ ಹನುಮಾನ್ ಚಾಲೀಸ್ ವಿಶೇಷ ಪಾರಾಯಣ
ಜರುಗಲಿದೆ.ಏ.21 ,22 ,24 ರ ರವಿವಾರ, ಸೋಮವಾರ , ಬುಧವಾರ ರಂದು ಮೂರು ದಿನಗಳ ಕಾಲ ಅನ್ನದಾಸೋಹ, { ಖಾಂಡ } ಏ.23 ರ ಮಂಗಳವಾರ ಬೆಳಗ್ಗೆ 2 ಗಂಟೆಗೆ ಮಹಾರುದ್ರ ಅಭಿಷೇಕ ಬೆಳಗ್ಗೆ 5, ಗಂಟೆಗೆ ಪುರವಂತರ ಜೊತೆಗೆ ಗ್ರಾಮದ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಅಗ್ನಿಪ್ರವೇಶ ಬೆಳಗ್ಗೆ 10 ಗಂಟೆಗ ಅಗ್ನಿ ಮುಕ್ತಾಯ (ಅಗ್ಗಿ ತುಳಿಯುವುದು) ಕಾರ್ಯಕ್ರಮ ನಡೆಯಲಿದೆ. ಅಂದೇ ಸಂಜೆ 6,30 ನಿ, ಕೆ,. ಮಹಾ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ ಏ,24, ರಂದು ಮುಂಜಾನೆ 9:30 ನಿ, ಕೆ, ಜಂಗಿ ಕುಸ್ತಿ ಇರುತ್ತದೆ ಎಂದು ಮಾರುತೇಶ್ವರ ಮಂದಿರ ಟ್ರಸ್ಟ್ ವತಿಯಿಂದ ಹಾಗೂ ಪ್ರಧಾನ ಅರ್ಚಕರಾದ ಸಿದ್ದಯ್ಯ ಸ್ವಾಮಿ ಮಠಪತಿ ಅವರು ತಿಳಿಸಿದ್ದಾರೆ ಸದ್ಭಕ್ತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾರುತೇಶ್ವರ ವೀರಭದ್ರೇಶ್ವರ ಆಶೀರ್ವಾದ ಪಡೆದು ಪುನಿತರಾಗುವಂತೆ ಅವರು, ಕೋರಿದ್ದಾರೆ