ಅಂಬೇಡ್ಕರ್ ಜಯಂತೋತ್ಸವ ಉಚಿತ ಕ್ಷೌರ ಸೇವೆ
ಕಲಬುರಗಿ:ಎ, 19: ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ ನಿಮಿತ್ತವಾಗಿ ಅನೀಲಕುಮಾರ ಗೋಗಿ ಅಂಬರೀಷ್ ಇಟಗಾ ಮಹೇಶ ಪಾಣೆಗಾಂವ ವಿದ್ಯಾಸಾಗರ ಹಾಬಾಳ ನರಸಿಂಹಲು ಅಡಕಿ ಗುಂಡು ಅಣಕಲ್ ರಾಘು ಮಾನೆ ಅವರಿಂದ ಕಲಬುರಗಿ ನಗರದಲ್ಲಿರುವ ಮಹಾದೇವಿ ತಾಯಿ ವೃದ್ಧಾಶ್ರಮದ ವೃದ್ಧ ಸದಸ್ಯರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿ ಬೆಳಗಿನ ಉಪಹಾರ ವಿತರಿಸಲಾಯಿತು.ದೇವರ ಸೃಷ್ಟಿ ಮಾನವ ಕ್ಷೌರಿಕರ ಸೃಷ್ಟಿ ಸುಂದರ ಮಾನವ ಕಾಯಕದ ಜೊತೆಗೆ ಉಚಿತ ಕ್ಷೌರ ಸೇವೆ ಸಲ್ಲಿಸುತ್ತಿರುವ ಯುವಕರ ನಿಸ್ವಾರ್ಥ ಸೇವೆಗೆ ವೃದ್ಧಾಶ್ರಮದ ವೃದ್ಧ ಸದಸ್ಯರು ಆಶೀರ್ವಾದಿಸಿದರು ಇದೆ ಸಂದರ್ಭದಲ್ಲಿ ಪ್ರಕಾಶ್ ಹುಣಸಿಗೇರಾ ಕಿರಣ್ ಕುಮಾರ್ ಚಿಕಲಿಕರ್ ಬಸವರಾಜ ಕೆರಿಅಂಬಲಗಾ ಭೋಜರಾಜ ಕುಲಕುಂದಾ ಶಶಿಕುಮಾರ್ ಮದ್ದೂರ ನರೇಶ್ ಜುಟಪಲ್ಲಿ ಮಹೇಶ ಚಿಗನೂರ ಇದ್ದರು.