ಕಾರ್ಯಕಾರಿ ಕೌನ್ಸಿಲರ್ ಆಗಿ ಡಾ. ಎಸ್. ಬಿ. ಗೌಡಪ್ಪ ಆಯ್ಕೆ
ಕಲಬುರಗಿ:ಏ.19:ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಕೃಷಿ ವಿಸ್ತರಣಾ ನಿರ್ದೇಶಕರು ಮತ್ತು ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ)ರಾದ ಡಾ. ಎಸ್. ಬಿ. ಗೌಡಪ್ಪ ರವರು ದಿಲ್ಲಿಯ ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆಯ ದಕ್ಷಿಣ ವಲಯದ ಕಾರ್ಯಕಾರಿ ಕೌನ್ಸಿಲರ್ ಆಗಿ ಮೂರು ವರ್ಷದ ಅವಧಿಗೆ (2024-2027) ಆಯ್ಕೆಯಾಗಿದ್ದಾರೆ. ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆಯು ದಿಲ್ಲಿಯಲ್ಲಿ ಸ್ಥಾಪಿತವಾಗಿದ್ದು, ಸಂಸ್ಥೆಯು 2000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.