ಗದಗನಲ್ಲಿ ಕೊಪ್ಪಳದ ಭಾಗ್ಯನಗರದ ಮೂವರ  ಹತ್ಯೆ
(ಸಂಜೆವಾಣಿ ವಾರ್ತೆ)
ಗದಗ, 19: ಇಲ್ಲಿನ  ದದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ಕೊಪ್ಪಳದ ಭಾಗ್ಯನಗರದ ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿರುವ ದಾರುಣ ಘಟನೆ ನಿನ್ನೆ  ಮಧ್ಯರಾತ್ರಿ ಗದಗ ಚನ್ನಮ್ಮ ವೃತ್ತದ ಸಮೀಪ ಇರುವ ದಾಸರ ಓಣಿಯಲ್ಲಿ ನಡೆದಿದೆ
ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ ಬಾಕಳೆ (27), ಕೊಪ್ಪಳದ ಭಾಗ್ಯನಗರದ ಪರುಶುರಾಮ (55), ಲಕ್ಷ್ಮಿ (45) ಮತ್ತು ಆಕಾಂಕ್ಷ (17) ಕೊಲೆಯಾಗಿದ್ದಾರೆ.
ಸುನಂದ ಬಾಕಳೆ ಪುತ್ರ ಕಾರ್ತಿಕ ಬಾಕಳೆ ಮದುವೆ ನಿಶ್ಚಯ ಕಾರ್ಯಕ್ರಮದ ನಿಮಿತ್ತ ಸಂಬಂಧಿಗಳು ಏ. 17ರಂದು ಮನೆಗೆ ಬಂದಿದ್ದರು. ಏ.18ರಂದು ರಾತ್ರಿ ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ಮಲಗಿದ್ದಾಗ ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ನಾಲ್ಕೂ ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪರಾರಿ; ಬಾಗಿಲು ಸದ್ದು ಕೇಳಿ ಅನುಮಾನಗೊಂಡು
ಪೊಲೀಸರಿಗೆ  ಕುಟುಂಬಸ್ಥರು ಫೋನ್ ಮಾಡಿದಾಗ
ದುಷ್ಕರ್ಮಿಗಳು ಎಸ್ಕೆಪ್ ಆಗಿದ್ದಾರೆ.
ಪರಿಶೀಲನೆ ; ಶ್ವಾನದಳದಿಂದ ಪರಿಶೀಲನೆ ಮಾಡಿದ್ದು ಸ್ಥಳಕ್ಕೆ ಗದಗ ಎಸ್ಪಿ ಬಿ ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿ ತನಿಖೆ ನಡೆಸುತ್ತಿದ್ದಾರೆ.
One attachment • Scanned