ವಿಕಸಿತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಲು ಲಕ್ಷ್ಮೀ ಅರುಣ ಮನವಿ
ಬಳ್ಳಾರಿ, ಏ.19:  ನಗರದ 19 ನೇ  ವಾರ್ಡಿನ ಪಟೇಲ್ ನಗರ, ರಾಮಯ್ಯ ಕಾಲೋನಿಯಲ್ಲಿ  ನಿನ್ನೆ ಸಂಜೆ ಗಾಲಿ ಲಕ್ಷ್ಮಿಅರುಣ ಜನಾರ್ದನರೆಡ್ಡಿಯವರು  ವಾರ್ಡಿನ ಪ್ರಮುಖ ಕಾರ್ಯಕರ್ತರ ಮನೆಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ತಿಳಿಸಿ. ಈ ಹಿಂದೆ ಮಾಜಿ ಸಚಿವ ಜನಾರ್ಧನರೆಡ್ಡಿ ಅವರು  ಬಳ್ಳಾರಿಗೆ ನೀಡಿದ ಶಾಶ್ವತ ಯೋಜನೆಗಳು ಹಾಗೂ ಅಭಿವೃದ್ಧಿಗಳ ಕುರಿತು ತಿಳಿಸಿ. ವಿಕಸಿತ ಹಾಗೂ ಸದೃಢ ಭಾರತಕ್ಕಾಗಿ ಮತ್ತೊಮ್ಮೆ  ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಲು.
ಬಿಜೆಪಿಗೆ ಮತನೀಡಿ ಎಂದರು.
ಕಾರ್ಯಕ್ರಮದಲ್ಲಿ ಕಿಟ್ಟು, ದಮ್ಮೂರು ಶೇಖರ್, ಬಿ.ಕೆ. ರಾಜು, ಮೆಹಪೂಜ್ ಆಲಿಖಾನ್, ನಗರ ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ,  ರೋಸಿರೆಡ್ಡಿ, ಮುನೀರ್ , ಶೇಕ್ಷಾವಲಿ, ಶೇಖಮ್ಮ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಹಾಗೂ ವಾರ್ಡಿನ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.