ನಗರದ ಶಂಕರ ಮಠದಲ್ಲಿಉಚಿತ ಕಣ್ಣು ಪರೀಕ್ಷೆ
(ಸಂಜೆವಾಣಿ ವಾರ್ತೆ)
 ಬಳ್ಳಾರಿ, ಏ.19:  ಸುವರ್ಣ ಭಾರತೀ ಮಹೋತ್ಸವದ ಅಂಗವಾಗಿ ನಿನ್ನೆ ಸಂಗನಕಲ್ಲು ರಸ್ತೆಯಲ್ಲಿನ ಶೃಂಗೇರಿ ಶಂಕರ ಮಠದ ಬಳ್ಳಾರಿ ಶಾಖೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ನಗರದ  ನೇತ್ರ ತಜ್ಞ ಡಾ. ಸುಧಾಕರ್ ಜೋಶಿ  ಶಿಬಿರದ ಉದ್ಘಾಟನೆ ಮಾಡಿದರು.  ಶಿಬಿರಕ್ಕೆ ಆಗಮಿಸಿದವರ ನೇತ್ರ  ತಪಾಸಣೆಯನ್ನು ಡಾ. ಮದನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಬಳ್ಳಾರಿಯ ಸಂಪನ್ಮೂಲ ವ್ಯಕ್ತಿಗಳಾದ  ದತ್ತಾತ್ರೇಯ ಮತ್ತಿಹಳ್ಳಿ ನೆರವೇರಿಸಿದರು. ಅಗತ್ಯ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. 
20 ವ್ಯಕ್ತಿಗಳಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು, ಅದನ್ನು ಬಳ್ಳಾರಿಯ ಮಾಧುರಿ ನರ್ಸಿಂಗ್ ಹೋಮ್ ನಲ್ಲಿ ಡಾ|| ಸುಧಾಕರ್ ಜೋಶಿಯವರ ನೇತೃತ್ವದಲ್ಲಿ ಉಚಿತವಾಗಿ ನೆರವೇರಿಸಲಿದೆಂದು ಮಠದ ಮುಖ್ಯಸ್ಥ ಬಿ. ಕೆ. ಬಿ. ಎನ್. ಮೂರ್ತಿ ತಿಳಿಸಿದ್ದಾರೆ.
 ರೂಪನಗುಡಿ ರಘುನಂದನ್, ಮೋಹನ್ ವಲ್ಲಭ ಶಾಸ್ತ್ರಿ,  ರಾಮಕೃಷ್ಣ ಪುರಾಣಿಕ್,  ಉಪ್ಪ ಗುಂಡೂರು ಮುರಳಿ,  ಮುರಾರಿ, ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ  ಪ್ರಕಾಶ್ ರಾವ್ ಹಾಗೂ ಮಠದ ವ್ಯವಸ್ಥಾಪಕ ನಟರಾಜ್ ಬಾಬು ಮತ್ತಿತರ ಪಾಲ್ಗೊಂಡಿದ್ದರು.