ನೇಹಾ ಹಿರೇಮಠ್ ಹತ್ಯೆ ಆರೋಪಿಗೆ  ಗಲ್ಲು ಶಿಕ್ಷಗೆ ಆಗ್ರಹಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.19:  ಹುಬ್ಬಳ್ಳಿಯಲ್ಲಿ ನಿನ್ನೆ ಸಂಜೆ ಪ್ರೀತಿ ನಿರಾಕರಿಸಿದಳೆಂದು ಮುಸ್ಲಿಂ  ಯುವಕನೋರ್ವ ಹಿಂದೂ ಯುವತಿಯ ಕುತ್ತಿಗೆ ಮನಬಂದಂತೆ ಚಾಕು ಇರಿದು ಹತ್ಯೆ ಮಾಡಿದ ದುರ್ಘಟನೆ ಖಂಡಿಸಿ ಇಂದು ಬಳ್ಳಾರಿಯಲ್ಲಿ  ವೀರಶೈವ ಲಿಂಗಾಯತ ಸಮಾಜದವರು  ರೈಲ್ವೆ ನಿಲ್ದಾಣದ ಪಕ್ಕದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ. ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯ್ತು.
ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್‌ನಲ್ಲಿ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರ ಪುತ್ರಿ ನೇಹಾ ಹಿರೇಮಠ, ಹತ್ಯೆಯಾದ ಯುವತಿ. ಫಯಾಜ್ ಹತ್ಯೆ ಮಾಡಿದ ಆರೋಪಿ.
ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ. ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಕಳೆದ ಆರು ತಿಂಗಳಿಂದ ಫೇಲ್ ಆಗಿ ಕಾಲೇಜ್ ಬಿಟ್ಟಿದ್ದ ಫಯಾಜ್. ಆದರೆ ಬಿಸಿಎ ಕಲಿಯುವಾಗ ನೇಹಾಳ ಸಹಪಾಠಿಯಾಗಿದ್ದ. ನಿನ್ನೆ ನೇಹಾ ಹಿರೇಮಠ ಕೊಲೆ ಮಾಡಲೆಂದೇ ಕಾಲೇಜ್ ಗೆ ಚಾಕು ಸಮೇತ ಬಂದಿದ್ದ ಫಯಾಜ್.ನೇಹಾ ಕುತ್ತಿಗೆಗೆ ಒಂಭತ್ತು ಬಾರಿ ಚಾಕುವಿನಿಂದ ಇರಿದಿರುವ ಪಾಪಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ  ಸ್ಥಳೀಯರು ದಾಖಲಿಸಿದರೂ  ಚಿಕಿತ್ಸೆ ಪಲಿಸದೇ ಯುವತಿ ಮೃತಪಟ್ಟಿದ್ದಾಳೆ.
ಕಳೆದ ಕೆಲವು ದಿನಗಳಿಂದ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ ಆರೋಪಿ. ದಿನೇದಿನೆ ಪ್ರೀತಿ ವಿಚಾರಕ್ಕೆ ಹಿಂಬಾಲಿಸಿ ಕಾಡುತ್ತಿದ್ದ ಫಯಾಜ್. ನಿನ್ನೆ ಕೂಡ ಫಾಲೋ ಮಾಡಿದ್ದ. ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿ ಪರಾರಿಯಾಗುತ್ತಿದ್ದ ವೇಳೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಫಯಾಜ್‌ನ ವಿಚಾರಣೆ ನಡೆಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆಯಾಯ್ತೇ? ಹತ್ಯೆಗೆ ಲವ್ ಜಿಹಾದ್ ಕಾರಣ ತಿಳಿಯಬೇಕಿದೆ. ಒಟ್ಟಾರೆ ಆರೋಪಿಗೆ ಅಮಸಯಕ ಯುವತಿಯನ್ನು ಹತ್ಯೆ ಮಾಡಿದ ಆರೀಪಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಯ್ತು.
ಪ್ರತಿಭಟನೆಯಲ್ಲಿ ಕೆ.ಎಂ.ಮಹೇಶ್ವರಸ್ವಾಮಿ, ಹೆಚ್.ಎಂ.ಗುರುಸಿದ್ದಸ್ವಾಮಿ, ಹೆಚ್. ಎಂ.ಕಿರಣ್ ಕುಮಾರ್. ಎಣ್ಣೆ ಯರ್ರಿಸ್ವಾಮಿ, ಬಿಸಲಳ್ಳಿ ಬಸವರಾಜ್. ಗೌರಿಶಂಕರಸ್ವಾಮಿ, ಮಂಜುನಾಥ ಗೋವಿಂದವಾಡ, ಕೋಳೂರು ಚಂದ್ರಶೇಖರ್, ಕೋರಿ ವಿರೂಪಾಕ್ಷಪ್ಪ,  ಹೊನ್ನನಗೌಡ, ಜೆ.ವಿ.ಮಂಜುನಾಥ, ಗಂಗಾವತಿ ವೀರೇಶ್, ಬಂಡೆಗೌಡ ಮೊದಲಾದವರು ಇದ್ದರು.