ಬಿಜೆಪಿ ಅಭ್ಯರ್ಥಿಪರ ಗಾಲಿ ಜನಾರ್ಧನರೆಡ್ಡಿ ಕಾರ್ಯಕರ್ತರೊಂದಿಗೆ ಚರ್ಚೆ
ಸಂಜೆವಾಣಿ ವಾರ್ತೆ
ಮಾನ್ವಿ.ಏ.೧೯- ಪಟ್ಟಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿ ರಾಯಚೂರು ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶನಾಯಕ ಪರ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಮಾತನಾಡಿ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್ ಪಕ್ಷದ ಮತಗಳು ದೊರೆಯುವಂತೆ ಸಮನ್ವಯವನ್ನು ಸಾಧಿಸಿದಲ್ಲಿ ಪಕ್ಷದ ಅಭ್ಯರ್ಥಿಯ ಗೇಲುವಿಗೆ ಅನುಕೂಲವಾಗಲಿದೆ. ರಾಯಚೂರು ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶನಾಯಕ ಹೆಚ್ಚು ಮತಗಳಿಂದ ಗೇಲುವು ಸಾಧಿಸಿದಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಗಾಲಿ ಜನಾರ್ಧನರೆಡ್ಡಿಯವರನ್ನು ಹಿರಿಯ ಬಿಜೆಪಿ ಮುಖಂಡರಾದ ಮಾನಪ್ಪನಾಯಕ ಸನ್ಮಾನಿಸಿ ಗೌರವಿಸಿದರು.
ರಾಯಚೂರಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶನಾಯಕರವರು ಇಂದು ನಾಮ ಪತ್ರವನ್ನು ಸಲ್ಲಿಸಲಿರುವುದರಿಂದ ರಾಯಚೂರಿಗೆ ತೆರಳಿದರು.
ಮುಖಂಡರಾದ ಶರಣಯ್ಯಸ್ವಾಮಿ,ಸಾಂಬಶಿವರೆಡ್ಡಿ,ನವಿನ್ ನಾಡಗೌಡರು, ಹೆಚ್.ಎಂ.ಬಾಬಾ, ದೊಡ್ಡಪ್ಪಹೂಗಾರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.