ಚುನಾವಣೆ ನೀತಿ ಸಂಹಿತೆ: ಪೋಲೀಸ್ ಅಧಿಕಾರಿಗಳಿಗೆ ಎಸ್ಪಿ ಬಿ.ನಿಖಿಲ್ ಸೂಚನೆ
ದೇವದುರ್ಗ.ಏ.೧೯- ಲೋಕಸಭೆ ಚುನಾವನೆ ನೀತಿ ಸಂಹಿತೆ ಎಲ್ಲಿಯೂ ಉಲ್ಲಂಘನೆಯಾಗದಂತೆ ನಿಮ್ಮ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಬಿ.ನಿಖಿಲ್ ಸೂಚಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಗಬ್ಬೂರು, ಮಸರಕಲ್ ಮತದಾನ ನಡೆಯುವ ಕೇಂದ್ರಗಳಿಗೆ ಭೇಟಿನೀಡಿ ಪರಿಶೀಲಿಸಿದರು. ಮೇ.೭ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಅಧಿಕಾರಿಗಳು ದಿನದ ೨೪ಗಂಟೆ ಅಲರ್ಟ್ ಆಗಿರಬೇಕು. ಗಬ್ಬೂರು, ಹೂವಿನಹೆಡಗಿ ಹಾಗೂ ತಿಂಥಣಿ ಬ್ರಿಡ್ಜ್ ಸೇರಿ ತಾಲೂಕಿನಲ್ಲಿ ಮೂರುಕಡೆ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ.
ಎಲ್ಲ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ಮಾಡಬೇಕು. ದಿನದ ೨೪ಗಂಟೆ ಅಲ್ಲಿ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ಗ್ರಾಮಗಳಿಗೆ ಸಿಬ್ಬಂದಿ ನಿಯಮಿತವಾಗಿ ಬೀಟ್ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಯಾವುದೇ ಫೋನ್ ಬಂದರೂ ನಿರ್ಲಕ್ಷ್ಯ ಮಾಡದೆ ಸ್ಪಂದಿಸುವ ಕೆಲಸ ಮಾಡಬೇಕು. ಸಿಬ್ಬಂದಿ ಅಗತ್ಯ ಸಲಹೆ ಸೂಚನೆ ನೀಡುವ ಜತೆಗೆ ಕೆಲಸಕ್ಕೆ ಸರಿಯಾಗಿ ನಿಯೋಜನೆ ಮಾಡಬೇಕು ಎಂದು ಸೂಚಿಸಿದರು.
ಸಿಪಿಐ ಸುಭಾಷ್‌ಚಂದ್ರ, ಗಬ್ಬೂರು ಠಾಣೆ ಪಿಎಸ್‌ಐ ನಿಂಗಯ್ಯ ಬುರ್ಲಿ, ಪಿಐ ಅಶೋಕ ಸದಲಗಿ, ಜಾಲಹಳ್ಳಿ ಠಾಣೆ ಪಿಎಸ್‌ಐ ಬಸವರಾಜ ನಾಯಕ ಇದ್ದರು.
೧೯-ಡಿವಿಡಿ-೪