ಐಪಿಎಲ್ ಬೆಟ್ಟಿಂಗ್: ಪ್ರಕರಣ ದಾಖಲು
(ಸಂಜೆವಾಣಿ ವಾರ್ತೆ)
ಸಿಂಧನೂರು.ಏ.೧೯-
ತಾಲೂಕಿನಾದ್ಯಂತ ಐ.ಪಿಎಲ್ ಕ್ರಿಕೇಟ್ ಬೆಟ್ಟಿಂಗ್ ತುಂಬಾ ಜೋರಾಗಿ ನಡೆದಿದ್ದು ಹಲವಾರು ಯುವಕರು ಹಣ ಹಾಕಿ ಕೈ ಸುಟ್ಟುಕೊಂಡು ತಮ್ಮ ಕುಟುಂಬದವರ ನ್ನು ಬಿದಿಗೆ ತಂದಿರಿಸಿದ ಪ್ರಕರಣಗಳು ಕಣ್ಣು ಮುಂದೆ ನಡೆಯುತ್ತಿದೆ ಇದಕ್ಕೆ ಪಾಲಕರು ಪೋಲಿಸ್ ಇಲಾಖೆ ಕಡಿವಾಣ ಹಾಕಿ ಮಕ್ಕಳನ್ನು ಬೆಟ್ಟಿಂಗ್ ಮಾಯೆಯಿಂದ ಹೊರ ತರಬೇಕು ಎನ್ನುತ್ತಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಡ್ರಗ್ಸ್ ಇದ್ದಂತೆ ಇದಕ್ಕೆ ಅಂಟಿಕೊಂಡರೆ ಅದರಿಂದ ಆಚೆ ಬರಲೂ ತುಂಬ ಕಷ್ಟದ ಕೆಲಸ . ರಾಯಚೂರು ಜಿಲ್ಲೆಯಲ್ಲಿಯೇ ಸಿಂಧನೂರು ತಾಲೂಕು ಬೆಟ್ಟಿಂಗ್ ನಡೆಸಿ ಹಣ ಮಿಲಾಯಿಸುವುದರಲ್ಲಿ ಎತ್ತಿದ ಕೈ ಎನ್ನುತ್ತಾದ್ದಾರೆ ಬಲ್ಲವರು.ದೇಶದ ಭವಿಷ್ಯದ ರೂವಾರಿಗಳಾಗ ಬೇಕಾದ ಯುವಕರು ಹೀಗೆ ಬೆಟ್ಟಿಂಗ್ ಗೆ ಅಂಟಿಕೊಂಡಿರುವುದು ದುರ್ದೈವದ ಸಂಗತಿ.
ಎಲ್ಲೆ ಇರು ಎಂತಾದರು ಇರು ಕೈ ಯಲ್ಲಿ ಮೊಬೈಲ್ ಇದ್ದರೆ ಸಾಕು : ಪಂದ್ಯಾವಳಿ ಗಳು ಎಲ್ಲೆ ನಡೆದರೂ ಇದ್ದಲ್ಲಿಯೇ ಆನ್ ಲೈನ್ ಮೂಲಕ ಬ್ಯಾಟ್ಸ್‌ಮನ್, ಬಾಲರ್ ,ವ್ಯಕ್ತಿಗಳನ್ನು ಆಯ್ಕೆಮಾಡಿಕೊಂಡು ಜೂಜಾಟದ ಲ್ಲಿ ತೊಡಗಿದ್ದಾರೆ.
ತುರವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲು : ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜಂಬುನಾಥನ ಹಳ್ಳಿ ಬೆಟ್ಟಿಂಗ್ ಕೊರರ ಮೇಲೆ ನಿನ್ನೆ ಪ್ರಕರಣ ದಾಖಲಾಗಿದೆ.
ಹಾಳಾಗುತ್ತಿರುವ ತುರವಿಹಾಳ : ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಮಟ್ಕಾ ,ಇಸ್ಪೀಟು ಯುವಕರು ಒಳಗೊಂಡಂತೆ ಪಟ್ಟಣದ ನಿವಾಸಿಗಳ ಬದುಕನ್ನು ಹಿಂಡಿ ಹಿಪ್ಪಿ ಮಾಡುತ್ತಿವೆ ಆದರೆ ಸ್ಥಳಿಯ ಪೋಲಿಸ್ ಠಾಣೆ ಇದ್ದರೂ ಕೂಡ ಯಾವುದೇ ಕಡಿವಾಣ ಇಲ್ಲ ಈ ಕೂಡಲೇ ಕಡಿವಾಣಕ್ಕೆ ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರಿಕರು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದರು.
ಪಂದ್ಯ ಪ್ರಾರಂಭವಾಗುತ್ತಿದ್ದಂತೆ ಹೋಟೆಲ್ ,ಪಾನ್ ಶಾಪ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪಂದ್ಯಾವಳಿಗಳ ಬೆಟಿಂಗ್ ದೇ ಚರ್ಚೆ.ತುರವಿಹಾಳ ಪಟ್ಟಣದಲ್ಲಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಪ್ರಮುಖವಾಗಿ ಆರೇಳು ಯುವಕರು ಐ.ಪಿಎಲ್ ಬೆಟಿಂಗ್ ದಂದೆ ಪ್ರಮುಖ ಉದ್ಯೋಗ ಮಾಡಿಕೊಂಡಿದ್ದಾರೆ.ಪೋನ್ ಪೆ ,ವಾಟ್ಸಾಫ್ ನಲ್ಲಿ ಹಣ ಹಾಕುತ್ತಿದ್ದಾರೆ.