ವಿಜೃಂಭಣೆಯಿಂದ ಜರುಗಿದ ರಂಗನಾಥ ರಥೋತ್ಸವ
ಸಿರವಾರ,ಏ.೧೮- ಪ್ರತಿ ವರ್ಷದಂತೆ ಈ ವರ್ಷವು ಸಹ ರಂಗನಾಥ ಸ್ವಾಮಿಯ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ತಾಲೂಕಿನ ಮಲ್ಲಟ ಗ್ರಾ.ಪಂ ವ್ಯಾಪ್ತಿಯ ವಡವಟ್ಟಿ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆ ವಿವಿಧ ಪೂಜೆ ಕೈಂಕಾರ್ಯಗಳು ಜರುಗಿದವು. ಸಂಜೆ ವಿವಿಧ ವಾದ್ಯಗಳೊಂದಿಗೆ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ರಥಕ್ಕೆ ಭಕ್ತರು ಬಾಳೆಹಣ್ಣು, ಮಂಡಕಿ ಎರಚಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರು ವಿವಿಧ ರಾಜಕೀಯ ಮುಖಂಡರು ಆಗಮಿಸಿ ರಂಗನಾಥ ಸ್ವಾಮಿಯ ಕೃಪೆಗೆ ಪಾತ್ರರಾದರು.
ಸಿರವಾರ ಠಾಣೆಯ ಪಿಎಸ್‌ಐ ಮಾರುತಿ, ಎಸ್.ವಿ ಸೂಕ್ತ ಬಂದೋಬಸ್ತ್ ಒದಗಿಸಿದರು.