ಪಟ್ಟಣದ ರಸ್ತೆ ಬದಿ ಅಂಗಡಿಗಳ ತೆರವು
ವಿಜಯಪುರ.ಏ೧೭:ಪಟ್ಟಣದ ಹಳೇ ಪುರಸಭಾ ಮುಂಭಾಗ ಸೇರಿದಂತೆ ಅಕ್ರಮವಾಗಿ ಇಡಲಾಗಿದ ರಸ್ತೆ ಬದಿ ಅಂಗಡಿಗಳನ್ನು ಪುರಸಭಾ ಸಿಬ್ಬಂದಿ ತರೆವುಗೊಳಿಸಿದರು.
ಶ್ರೀ ವೆಂಕಟರಮಣಸ್ವಾಮಿ ಆರ್ಚಿನಿಂದ ಹಳೆ ಪುರಸಭಾ ವೃತ್ತದವರೆಗೆ ಎರಡು ಬದಿಯಲ್ಲಿ ಅಕ್ರಮವಾಗಿ ತರಕಾರಿ ಅಂಗಡಿ ತಲೆ ಎತ್ತಿದ್ದವು. ಇದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ದಿನದಿಂದ ದಿನಕ್ಕೆ ಬೀದಿ ಬದಿ ವ್ಯಾಪಾರಸ್ಥರ ಸಂಖ್ಯೆ ಜಾಸ್ತಿಯಾಗುತ್ತಿದೆ. ಜೊತೆಗೆ ಅನಧಿಕೃತ ವ್ಯಾಪಾರ ವಹಿವಾಟು ಮಾಡುವವರ ಸಂಖ್ಯೆಯು ಜಾಸ್ತಿಯಾಗಿದ್ದು, ಫುಟ್ ಪಾತ್‌ಗಳಲ್ಲಿ ನಡೆದುಕೊಂಡು ಹೋಗಲು ಜಾಗವೇ ಇಲ್ಲದಂತಾಗಿದೆ. ಹೀಗಾಗಿ ಇದು ಪಟ್ಟಣದ ಅಂದ ಕೆಡಿಸಿದ್ದಲ್ಲದೆ, ಹಲವು ಅಪಘಾತಗಳಿಗೂ ಕಾರಣವಾಗಿತ್ತು.
ಪುರಸಭೆಗೆ ಸಾಕಷ್ಟು ಬಾರಿ ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತಿದೆ ಎಂದು ದೂರು ಬರುತ್ತಿದ್ದ ಹಿನ್ನೆಲೆ ಮಂಗಳವಾರದಂದು ಪುರಸಭಾ ಸಿಬ್ಬಂದಿ ಪಟ್ಟಣದ ರಸ್ತೆಯ ಬದಿಯಲ್ಲಿ ಇಟ್ಟಿರುವ ಅಂಗಡಿಗಳನ್ನು ತರಕಾರಿ ಅಂಗಡಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ಸ್ಥಳದಲ್ಲಿ ವ್ಯಾಪಾರ ಮಾಡಬೇಕೆಂದು ಬೇರೆ ಕಡೆ ಇಡಲು ತೆರುವು ಮಾಡಿದರು.
ವ್ಯಾಪರಸ್ಥರು ಆಕ್ರೋಶ: ಸುಮಾರು ವರ್ಷಗಳಿಂದ ಇದೇ ರಸ್ತೆಯಲ್ಲಿ ವ್ಯಾಪಾರ ಮಾಡ್ತಿದ್ವಿ. ಇದೀಗಾ ಏಕಾಏಕಿ ಅಂಗಡಿಗಳನ್ನ ತೆರವು ಮಾಡ್ತಿದ್ದಾರೆ. ಇದೇ ವ್ಯಾಪರವನ್ನು ನಂಬಿಕೊಂಡು ನಮ್ಮ ಜೀವನ ನಡೆತ ಇದೆ. ಈಗಾ ತೆರವು ಮಾಡಿದ್ರೆ ನಮ್ಮ ಜೀವನ ಹೇಗೆ. ಸಾವಿರಾರು ರುಪಾಯಿ ಬಂಡವಾಳ ಹಾಕಿ ವ್ಯಾಪಾರ ನಡುಸ್ತಾ ಇದ್ವಿ. ಇದೀಗಾ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ದಾರೆ. ನಮ್ಮ ಈ ಬೀದಿ ವ್ಯಾಪಾರ ವಹಿವಾಟು ಬೇರೆ ಏನು ಗೊತ್ತಿಲ್ಲ ಅಂತ ಅಧಿಕಾರಿಗಳ ವಿರುದ್ದ ಕೆಲ ವ್ಯಾಪಾರಸ್ತರು ಆಕ್ರೋಶ ವ್ಯಕ್ತಪಡಿಸಿದ್ರು.
ವ್ಯೆರುದ್ಯ;ಕೆಲವರು ಅಕ್ರಮವಾಗಿ ಅಂಗಡಿಗಳನ್ನು ಇಟ್ಟು ಕೊಂಡಿದರು ಅಧಿಕಾರಿಗಳು ಅವನ್ನು ತೆರವು ಗೊಳಿಸಿಲ್ಲ ನಮ್ಮಂತಹ ಬಡ ವ್ಯಾಪರ ಮಾಡಿಕೊಂಡು ಜೀವನ ನೆಡಿಸುತ್ತಿರುವವರ ಬಡ ವ್ಯಾಪರಿಗಳನ್ನು ತೆರುವು ಮಾಡುವುದು ಎಷ್ಟು ಸರಿ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡರು.