ಚಳಕಾಪೂರ: ವೈಭವದ ಸದ್ಗುರು ಶ್ರೀ ಸಿದ್ದಾರೂಢರ ರಥೋತ್ಸವ
ಭಾಲ್ಕಿ:ಏ.19: ತಾಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ದಾರೂಢರ ಮಠದಲ್ಲಿ, ರಾಮ ನವಮಿ ಮತ್ತು ಸದ್ಗುರು ಶ್ರೀ ಸಿದ್ಧಾರೂಢರ 188ನೇ ಜಯಂತಿ ಮಹೋತ್ಸವ ನಿಮಿತ್ಯ ಬಧವಾರ ವೈಭವದ ರಥೋತ್ಸವ ನಡೆಯಿತು.
ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಚಿದಂಬರಾಶ್ರಮ ಶ್ರೀ ಸಿದ್ದಾರೂಢ ಮಠ ಬೀದರಿನ ಡಾ| ಶಿವಕುಮಾರ ಮಹಾಸ್ವಾಮಿಗಳು, ಸದ್ಗುರು ಸಿದ್ಧಾರೂಢರರು ಭಕ್ತರ ಆರಾಧ್ಯ ದೈವರು, ಅವರ ಕರ್ಮಭೂಮಿ ಹಬ್ಬಳ್ಳಿಯಲ್ಲಿ ಶಿವರಾತ್ರಿಯಂದು ಅತಿ ವಿಜ್ರಂಭಣೆಯಿಂದ ರಥೋತ್ಸವ ಜರುಗುತ್ತದೆ. ಅವರ ಜನ್ಮ ಭೂಮಿ ಚಳಕಾಪೂರದಲ್ಲಿ ಶ್ರೀರಾಮ ನವಮಿಯಂದು ಅವರು ಅವತಾರ ತೋರಿದ ಪ್ರಯುಕ್ತ ರಾಮನವಮಿಯ ದಿನ ರಥೋತ್ಸವ ನಡೆಸಲಾಗುತ್ತಿದೆ. ಭಕ್ತರ ಇಷ್ಟಾರ್ಥ ಪೂರ್ಣಗೊಳಿಸುವ ಸದ್ಗುರು ಸಿದ್ಧಾರೂಢರ ರಥೋತ್ಸವದ ವೈಭವವನ್ನು ಕಣ್ಣು ತುಂಬಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಳಕಾಪೂರ ಶ್ರೀಮಠದ ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು, ಡಾ| ಸ್ವರೂಪಾನಂದ ಸ್ವಾಮಿಗಳು, ಶ್ರೀ ದಯಾನಂದ ಸ್ವಾಮಿಗಳು, ಶ್ರೀ ಅದ್ವೈತಾನಂದ ಸ್ವಾಮಿಗಳು, ಶ್ರೀ ಗಣೇಶಾನಂದ ಮಹಾರಾಜರು, ಶ್ರೀ ಸಿದ್ಧಾನಂದ ಸ್ವಾಮಿಗಳು, ಶ್ರೀ ಪ್ರಣವಾನಂದ ಸ್ವಾಮಿಗಳು, ವiತೋಶ್ರೀ ಲಕ್ಷ್ಮೀದೇವಿ ತಾಯಿ, ಡಾ| ವಿರೂಪಾಕ್ಷ ಶಿವಾಚಾರ್ಯರು, ಶ್ರೀ ಜಡಿ ಸಿದ್ದೇಶ್ವರ ಸ್ವಾಮಿಗಳು, ಶ್ರೀ ಸೋಮೇಶ್ವಾರಾನಂದ ಸ್ವಾಮಿಗಳು, ಶ್ರೀ ಪೂರ್ಣಾನಂದ ಸ್ವಾಮಿಗಳು, ಮಾತೋಶ್ರೀ ಸಿದ್ದೇಶ್ವರಿ ತಾಯಿ, ಮಾತೋಶ್ರೀ ಆನಂದಮಯಿ ತಾಯಿ, ಮಾತೋಶ್ರೀ ಸುಶಾಂತಾ ತಾಯಿ, ಮಾತೋಶ್ರೀ ಯೋಗೇಶ್ವರಿ ತಾಯಿ, ಮಾತೋಶ್ರೀ ವಿದ್ಯಾವತಿ ತಾಯಿ, ಮಾತೋಶ್ರೀ ಸಂಗೀತಾ ತಾಯಿ, ಮಾತೋಶ್ರೀ ಅಮೃತಾನಂದಮಯಿ ತಾಯಿ, ಮಾತೋಶ್ರೀ ರಾಜೇಶ್ವರಿ ತಾಯಿ, ಮಾತೋಶ್ರೀ ಶಸಿಕಲಾ ತಾಯಿ, ಗೋಪಾಲ ಶಾಸ್ತ್ರಿಗಳು ಕಲ್ಲಹಂಗರಗಾ, ಮಲ್ಲಿಕಾರ್ಜುನ ಸ್ವಾಮಿಗಳು ಕಲಬುರಗಿ, ಪೂರ್ಣಾನಂದ ಸ್ವಾಮಿಗಳು, ಮಾಧವಾನಂದ ಸ್ವಾಮಿಗಳು, ಸಂಗೀತ ಶಿಕ್ಷಕ ಗುಂಡಪ್ಪಾ, ಸೋಮನಾಥ ಶೀಲವಂತ, ಬಸವರಾಜ ಹುಲೆಪ್ಪನೋರ, ಪ್ರಭು ಮಾಸಲದಾರ, ಯಲ್ಲಾಲಿಂಗ ರೊಟ್ಟೆ, ಶಿವಕುಮಾರ ಹುಲೆಪ್ಪನೋರ, ಉಪನ್ಯಾಸಕ ನರೇಂದ್ರ ಪಾಟೀಲ, ರಮೇಶ ಮಜಕುರಿ, ಮಹೇಶ ಚಂದಾಪುರೆ, ರಕ್ಷಿತಾ ಸಂಗಮೇಶ, ಚಂದ್ರಶೇಖರ ಪಾಟೀಲ, ಪಾರ್ವತಿ ಕಂಟೆಪ್ಪ, ಧೂಳಯ್ಯಾ ಸ್ವಾಮಿ ಸೇರಿದಂತೆ ಹಲವರು ಇದ್ದರು.