ವಿಜಯ್ ರಾಮೇಗೌಡ ಮಾದರಿ ರಾಜಕಾರಣಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.19: ಮಿತ್ರ ಫೌಂಡೇಶನ್ ಸ್ಥಾಪಿಸಿ ತಾಲ್ಲೂಕಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಮಾಜಸೇವಾ ಕೆಲಸಗಳನ್ನು ಕೈಗೊಂಡು ತಾಲ್ಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಢಿಸುತ್ತಿರುವ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಮಾದರಿ ರಾಜಕಾರಣಿ ಎಂದು ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯರಮೇಶ್ ತಿಳಿಸಿದರು.
ಅವರು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಅವರ 52 ನೇ ಹುಟ್ಟುಹಬ್ಬದ ಅಂಗವಾಗಿ ಒಳ ರೋಗಿಗಳಿಗೆ ಹಣ್ಣುಹಂಪಲ ವಿತರಿಸಿ ಮಾತನಾಡಿದರು.
ಜನ್ಮ ಭೂಮಿಯ ಋಣ ತೀರಿಸುವ ಉದ್ದೇಶದಿಂದ ಮಿತ್ರ ಫೌಂಡೇಶನ್ ಸಂಸ್ಥೆ ಸ್ಥಾಪಿಸಿ ಆ ಮೂಲಕ ತಮ್ಮ ದುಡಿಮೆಯ ಸ್ವಲ್ಪ ಭಾಗದ ಹಣವನ್ನು ತಾಲ್ಲೂಕಿನ ಬಡವರ, ದೀನದಲಿತರ, ಹಿಂದುಳಿದವರ್ಗದವರ ಏಳಿಗೆಗೆ ದೇವಾಲಯಗಳ ಜೀರ್ಣೋದ್ದಾರಕ್ಕೆ, ಅನಾರೋಗ್ಯಕ್ಕೆ ತುತ್ತಾದವರಿಗೆ ಚಿಕಿತ್ಸೆ, ಬೆಳೆನಾಶವಾದ ರೈತರಿಗೆ ನೆರವು, ಯುವಕರಿಗೆ ಕ್ರೀಡೆಗಳಿಗೆ ಪೆÇ್ರೀತ್ಸಾಹ, ಮನರಂಜನೆ ಮುಂತಾದ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನೆರವು ನೀಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ನಮ್ಮ ತಾಲ್ಲೂಕಿಗೆ ನಿರಂತರವಾಗಿ ದೊರಕಲಿ ಅವರಿಗೆ ದೇವರು ಆಯಸ್ಸು,ಆರೋಗ್ಯ ಸಕಲ ಸಂಪತ್ತನ್ನು ನೀಡಲಿ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವಪ್ರಸಾದ್ ಮಾತನಾಡಿ ಕುವೆಂಪು, ಬುದ್ದ, ಬಸವ, ಅಂಬೇಡ್ಕರ್ ರವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಹಾಗೂ ಅವರ ಚಿಂತನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ವಿಜಯ್‍ರಾಮೇಗೌಡರ ಬದುಕು ನಮಗೆ ಮಾದರಿಯಾಗಿದೆ. ಸರಳ ವ್ಯಕ್ತಿತ್ವವನ್ಮು ಅಳವಡಿಸಿಕೊಂಡು, ಜನಾನುರಾಗಿಯಾಗಿ ಎಲ್ಲರ ವಿಶ್ವಾಸಗಳಿಸಿ ಪಕ್ಷ ಸಂಘಟಿಸಿ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಾಣ ಮಾಡಲು ಹೆಜ್ಜೆ ಇಡುತ್ತಿರುವ ವಿಜಯ್ ರಾಮೇಗೌಡರಿಗೆ ಇನ್ನೂ ಹೆಚ್ಚಿನ ರಾಜಕೀಯ ಸ್ಥಾನಮಾನಗಳು ಸಿಗಲಿ. ತಾಲ್ಲೂಕಿನ ಭವಿಷ್ಯದ ನಾಯಕನಾಗಿ ಹೊರಹೊಮ್ಮಲಿ ಎಂದು ಶುಭಕೋರಿದರು.
ಇದೇ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿಗೋವಿಂದರಾಜು, ಪುರಸಭಾ ಸದಸ್ಯರಾದ ಹೆಚ್.ಎನ್.ಪ್ರವೀಣ್, ಡಿ.ಪ್ರೇಮ್‍ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಚೇತನಮಹೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ವಿಜಯ್‍ರಾಮೇಗೌಡರ ಆಪ್ತಸಹಾಯಕ ಬಸವರಾಜು, ಛಲವಾದಿ ಮಹಾಸಭಾ ಜಿಲ್ಲಾದ್ಯಕ್ಷ ಮಂಬಳ್ಳಿಜಯರಾಮು ತಾಲ್ಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫಯಾಜ್‍ಅಹಮದ್, ಉಪಾದ್ಯಕ್ಷ ಅಹಮದ್, ಕಾಂಗ್ರೆಸ್ ಮುಖಂಡರಾದ ಮುರುಕನಹಳ್ಳಿ ವಿಜಯ್‍ಕುಮಾರ್, ಸ್ನೇಹಿತರಮೇಶ್, ಹೊಸಹೊಳಲು ಕೃಷ್ಣೇಗೌಡ, ಪ್ರಕಾಶ್, ಸೇರಿದಂತೆ ನೂರಾರು ವಿಜಯ್ ರಾಮೇಗೌಡರ ಅಭಿಮಾನಿಗಳು ಹಾಜರಿದ್ದರು.