ಮೋದಿ ಗ್ಯಾರಂಟಿ ಸುಳ್ಳಿನ ಗ್ಯಾರಂಟಿ ಅμÉ್ಟೀ: ಎಚ್.ಸಿ.ಮಹಾದೇವಪ್ಪ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.19- ಮೋದಿ ಗ್ಯಾರಂಟಿ ಎನ್ನುವುದು ಸುಳ್ಳಿನ ಗ್ಯಾರಂಟಿ ಎಂದು ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಅವರು ಮಾತನಾಡಿ, ಮೋದಿ ಗ್ಯಾರಂಟಿಗಳು ಸುಳ್ಳಿನ ಗ್ಯಾರಂಟಿಗಳು, ಮೋದಿ ಬೆಲೆ ಏರಿಕೆ ಕಡಿಮೆ ಮಾಡಿದ್ದಾರಾ.? 15 ಲಕ್ಷವನ್ನು ಜನರಖಾತೆಗೆ ಹಾಕಿದ್ದಾರಾ.? ಪ್ರತಿ ವರ್ಷ ಎರಡು ಕೋಟಿ ಉದ್ಯೋಗವನ್ನ ಯುವಕರಿಗೆ ಕೊಟ್ಟಿದ್ದಾರಾ.? ರೈತರ ಆದಾಯ ಡಬಲ್ ಮಾಡಿದ್ದಾರಾ. ಇವೆಲ್ಲ ಅವರೇ ಹೇಳಿದ್ದು, ಅವರೇ ಹೇಳಿದ್ದ ಮಾತಿಗೆ ವಿರುದ್ಧಆದ್ರೆ, ಇವೆಲ್ಲ ಸುಳ್ಳಿನ ಗ್ಯಾರಂಟಿಗಲೇ ಎಂದು ಬಿಜೆಪಿ ಪ್ರಣಾಳಿಕೆಗೆ ಕಿಡಿಕಾರಿದರು.
ಶ್ರೀರಾಮ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಹಲ್ಲೆ ವಿಚಾರಕ್ಕೆ ಮಾತನಾಡಿ, ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ಇಂಥಹ ರಾಜಕೀಯ ಬೇಳೆಯಿಂದ ಜನರನ್ನ ಒಡೆದು ಆಳುವಂತಹ ಬಿಜೆಪಿಯ ಆಟ ಬಹಳ ದಿನ ನಡೆಯಲ್ಲ, ಹಿಂದೂ ಯುವಕರ ಮೇಲಿನ ಹಲ್ಲೆಯು ಬಿಜೆಪಿ ಬೇಳೆಯಾಗಿದೆ, ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚಾರ ವಿಚಾರಗಳಿಗೆ ಮುಕ್ತ ಅವಕಾಶ ಇದೆ. ಯಾರ್ಯಾರು ಈ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಾರೆ, ಅವರಿಗೆ ಕಾನೂನು ತನ್ನಕ್ರಿಯೆ ಮಾಡುತ್ತೆ ಎಂದರು.
ಸಂವಿಧಾನ ವಿಚಾರದಲ್ಲಿ ಕಾಂಗ್ರೆಸ್ ದಲಿತರನ್ನು ಟಾರ್ಗೆಟ್ ಮಾಡಿದೆ ಎನ್ನುವ ಎನ್. ಮಹೇಶ್ ಹೇಳಿಕೆ ತಿರುಗೇಟು ನೀಡಿದ ಅವರು, ಎನ್.ಮಹೇಶ್ ನಮ್ಮ ಸ್ನೇಹಿತರೆ, ಮೊದಲು ಅವರು ಒಂದು ಪೆನ್ ಹಿಡಿದುಕೊಂಡು ರಿಷರ್ವೇಷನ್ ಮೇಲಿಂದ ಕೆಳಗೆ ಕೆಳಗಿಂದ ಮೇಲೆ ಅಂತ ವಿರೋಧ ಮಾಡುತ್ತಿದ್ದರು.
ಮಂಡಲ್ ಕಮಿಷನ್ ವರದಿಯನ್ನು ವಿರೋಧ ಮಾಡಿದವರು ಯಾರು?
ಆ ವರದಿ ಜಾರಿಯಾದಾಗಕ ಮಂಡಲ ಯಾಕೆ ಹೋಯ್ತು, ಯಾರಿಂದ ಆಯ್ತು, ಸಂವಿಧಾನಕ್ಕೆ ವಿರುದ್ಧವಾಗಿರುವವರು ಬಿಜೆಪಿಯವರು. ಸಂವಿಧಾನ ಪರಾಮರ್ಶೆ ಮಾಡಿದವರು ವಾಜಪೇಯಿ ಅವರು. ಪರಾಮರ್ಶೆ ಅಂದ್ರೆ, ಸಂವಿಧಾನ ಬದಲಾವಣೆ ಅಂತ ಅರ್ಥ, ಈಗ ಧರ್ಮದ ಮೇಲೆ ದೇಶಕಟ್ಟಬೇಕು ಎನ್ನುತ್ತಾರೆ. ಸಂವಿಧಾನದಲ್ಲಿ ಧರ್ಮ, ದೇಶ ಅಂತ ಇದೀಯ? ಎಲ್ಲರೂ ಒಂದೇ, ಧರ್ಮದ ಹೆಸರಿನಲ್ಲಿ ದೇಶ ಕಟ್ಟುವುದೇ ಸಂವಿಧಾನ ವಿರೋಧಿ ನಡೆ.
ಧರ್ಮ ಆಧಾರಿತ ರಾಜಕೀಯ ಮಾಡುವುದೇ ಸಂವಿಧಾನ ವಿರೋಧಿ ನಡೆ. ಕಾಂಗ್ರೆಸ್ ಇದರತಂಟೆಗೆ ಹೋಗಲ್ಲ ಎಂದು ಗುಡುಗಿದರು.