ಪೌರಕಾರ್ಮಿಕರಿಂದ ಮಲ ಹೊರಿಸಿದ ಪ್ರಕರಣವಲ್ಲಿ ಆಡಳಿತ ಯಂತ್ರ ಸರ್ಕಾರಿ ವಾಹನಗಳ ದುರ್ಬಳಕೆ..!
ಸಂಜೆವಾಣಿ ವಾರ್ತೆ
ಹನೂರು ಏ 19 :- ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಪೌರಕಾರ್ಮಿಕರ ತಲೆಯ ಮೇಲೆ ಮಲಹೊರಿಸಿದ ಪ್ರಕರಣ ಅಷ್ಟಕ್ಕೆ ಸೀಮಿತವಾಗದೆ ಆಡಳಿತ ಯಂತ್ರ ಸರ್ಕಾರಿ ವಾಹನಗಳ ದುರ್ಬಳಕೆ ಆಗಿರುವುದು ಬೆಳಕಿಗೆ ಬಂದಿದ್ದು ಹೆಚ್ಚಿನ ವಿಚಾರಣೆ ಅಗತ್ಯವಿದೆ.
ಪ.ಪಂಚಾಯತಿ ಕಚೇರಿಯ ಕೆಳಗಡೆಯೇ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಸಾರ್ವಜನಿಕ ಶೌಚಾಲಯವನ್ನು ಖಾಸಗಿಯವರಿಗೆ ಟೆಂಡರ್ ನೀಡಲಾಗಿದ್ದು ಅದರ ನಿರ್ವಹಣೆ ಮತ್ತು ಸ್ವಚ್ಛತೆ ಅವರ ಜವಾಬ್ದಾರಿಯಾಗಿ ರುತ್ತದೆ.
ಶೌಚಾಲಯದ ಗುಂಡಿಯನ್ನು ಸ್ವಚ್ಛಗೊಳಿಸಬೇಕಾದರೆ ಪಂಚಾಯ್ತಿ ಸುಪರ್ದಿಯಲ್ಲಿ ರುವ ಮಲ ಸಾಗಿಸುವ ಸಕ್ಕಿಂಗ್ ಸ್ವಚ್ಛತಾ ಯಂತ್ರಕ್ಕೆ ಶೌಚಾಲಯ ದ ಟೆಂಡರ್ ದಾರರು ಇಂತಿಷ್ಟು ಎಂದು ಹಣ ಪಾವತಿಸಿ ಸ್ವಚ್ಛತೆಗೆ ಬಳಸುವುದು ನಿಯಮ.
ಆದರೆ ಈ ಪ್ರಕರಣದಲ್ಲಿ ಯಾವುದೇ ಹಣ ಪಾವತಿಸದೆ ಪಟ್ಟಣ ಪಂಚಾಯ್ತಿ ಮುಖ್ಯಾಧಿ ಕಾರಿ ಹಾಗೂ ಆರೋಗ್ಯ ನಿರೀಕ್ಷಕಿಯನ್ನು ಸರಿಪಡಿಸಿಕೊಂ ಡಿರುವ ಶೌಚಾಲಯದ ಗುತ್ತಿಗೆದಾರರು ಅವರಿಗೆ ಹಣ ನೀಡಿ ಸರ್ಕಾರಿ ಆಡಳಿತ ಯಂತ್ರ ವನ್ನು ಕೈವಶ ಮಾಡಕೊಂಡಿರು ವುದರ ಜತೆಗೆ ಸರ್ಕಾರಿ ವಾಹನ ಗಳಾದ ಪಂಚಾಯ್ತಿಯ ಜೆಸಿಬಿ, ಟ್ರಾಕ್ಟರ್, ಟೆಂಪೆÇೀಗಳ ಜತೆಗೆ ಅವುಗಳ ಅಧಿಕೃತ ಚಾಲಕರುಗ ಳನ್ನು ಕೂಡಾ ದುರ್ಬಳಕೆ ಮಾಡಿ ಕೊಂಡಿರುವುದು ಸ್ಪಷ್ಟವಾಗಿದೆ.
ರಾತ್ರೋ ರಾತ್ರಿ ಜೆಸಿಬಿ ಯಂತ್ರ ವನ್ನು ಬಳಸಿ ಅವೈಜ್ಞಾನಿಕವಾಗಿ ಶೌಚ ಗುಂಡಿಯಿಂದ ಮಲ ಹೊರ ತೆಗೆಯಲು ಇವರಿಗೆ ಅನುಮತಿ ನೀಡಿದವರಾರು..? ಅದನ್ನು ತುಂಬಿ ಸಾಗಿಸಲು ಪಟ್ಟಣದ ಕಸ ಸಾಗಣೆ ವಾಹನ ಗಳಾದ ಟ್ರಾಕ್ಟರ್ ಟೆಂಪೆÇೀ ಗಳನ್ನು ಹಾಗೂ ಅದರ ಚಾಲಕ ರುಗಳನ್ನು ಜತೆಗೆ ಪೌರಕಾರ್ಮಿ ಕರುಗಳನ್ನು ದುರ್ಬಳಕೆ ಮಾಡಿ ಕೊಳ್ಳಲು ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕಿರ ವರುಗಳೇ ಮೂಲ ಕಾರ ಣಕರ್ತರಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ.
ಇದು ನಿನ್ನೆ ಮೊನ್ನೆಯ ಕತೆಯಾಗಿರದೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಗರಣವಾಗಿದೆ. ಈ ಬಗೆಗಿನ ಸತ್ಯಾ ಸತ್ಯತೆಗಳನ್ನು ಅರಿಯಬೇಕಾದರೆ ಶೌಚಾಲಯದ ಗುತ್ತಿಗೆದಾರರು ಸ್ವಚ್ವತಾ ಕಾರ್ಯಕ್ಕೆ ಪ.ಪಂಗೆ ಯಾವ್ಯಾವ ಸಾಲಿನಲ್ಲಿ ಎಷ್ಟೆಷ್ಡು ಹಣ ಪಾವತಿಸಿದ್ದಾರೆಯೆ..,? ಇಲ್ಲವೆ..? ಎಂಬುದರ ಬಗ್ಗೆ ಹಿಂದಿನ ಪಂಚಾಯ್ತಿ ದಾಖಲೆಗಳ ಪರಿಶೀಲನೆ ನಡೆಸಿದಲ್ಲಿ ಇವರ ಬಂಡವಾಳ ಬಯಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಮಲ ಹೊರುವ ಪದ್ದತಿಗೆ ಇಂಬು ನೀಡಿರುವುದರ ಜತೆಗೆ ಸರ್ಕಾರದ ಆಡಳಿತ ಯಂತ್ರ, ಸರ್ಕಾರಿ ವಾಹನಗಳು, ವಾಹನ ಚಾಲಕರು ಮತ್ತು ಪೌರಕಾರ್ಮಿಕರ ದುರ್ಬಳಕೆ ಮಾಡಿಕೊಂಡು ದುರಾಡಳಿತ ನಡೆಸಿ ಭ್ರಷ್ಟಾಚಾರವೆಸಗಿರುವ ಪ.ಪಂ.ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಂಡು ಮುಂದೆ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರಿಕೆ ನೀಡುವಂತೆ ನಾಗರೀಕರು ಆಗ್ರಹಿಸಿದ್ದಾರೆ.