ವಚನ ಜಾತ್ರೆಯಲ್ಲಿ ಪಾಲ್ಗೊಳ್ಳಿ : ನಿರ್ಮಳೆ
ಸಂಜೆವಾಣಿ ವಾರ್ತೆ
ಔರಾದ್ :ಏ.19: ಎಪ್ರಿಲ್ 19ರಿಂದ 23ರ ವರೆಗೆ ಭಾಲ್ಕಿ ಚನ್ನಬಸವ ಆಶ್ರಮದಲ್ಲಿ ಡಾ. ಚನ್ನಬಸವ ಪಟ್ಟದ್ದೆವರ ಸ್ಮರಣೋತ್ಸವ ನಿಮಿತ್ತ ನಡೆಯುವ ವಚನ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ವಿನಂತಿಸಿದರು.
ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪಟ್ಟದ್ದೆವರ ಸ್ಮರಣೋತ್ಸವದ ಜೊತೆಗೆ ಅಕ್ಕಮಹಾದೇವಿ ಜಯಂತಿ ಹಾಗೂ ಕಸಾಪ ರಾಜ್ಯ ಘಟಕದ ವತಿಯಿಂದ ಕರ್ನಾಟಕ ಸಂಭ್ರಮ 50ರ ಸಮಾರಂಭವು ನಡೆಯಲಿದೆ ಎಂದಿದ್ದಾರೆ.
ಬಸವೇಶ್ವರ ಡಿ.ಈಡಿ ಕಾಲೇಜು ಪ್ರಾಚಾರ್ಯ ಶರಣಪ್ಪ ನೌಬಾದೆ ಮಾತನಾಡಿ, ನೂತನ ಅನುಭವ ಮಂಟಪ ಶಿಲ್ಪಿ ಪೂಜ್ಯ ಚನ್ನಬಸವ ಪಟ್ಟದ್ದೆವರ ಸ್ಮರಣಾರ್ಥ ಬಸವಾದಿ ಶರಣರ ಅನನ್ಯ ಕೊಡುಗೆಯಾದ ವಚನ ಕನ್ನಡ ಸಾಹಿತ್ಯದ ಬಗ್ಗೆ ಚಿಂತನೆಗಳು ಜರುಗಲಿವೆ. ಸಾಹಿತ್ಯಿಕ, ಸಾಂಸ್ಕøತಿಕವಾಗಿ ಕಾರ್ಯಕ್ರಮ ಅರ್ಥಪೂರ್ಣವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನರು ಪಾಲ್ಗೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಂಡೆಪ್ಪ ಕಂಟೆ, ಶರಣಪ್ಪ ಚಿಟಮೆ, ಅಮೃತರಾವ ಬಿರಾದಾರ್, ಕಲ್ಯಾಣರಾವ ಶೆಂಬೆಳ್ಳೆ, ಅಶೋಕ ಶೆಂಬೆಳ್ಳೆ, ಅನೀಲ ದೇವಕತೆ, ಅಂಬಾದಾಸ ನಳಗೆ, ಶ್ರೀಕಾಂತ ಅಲಮಾಜೆ, ಇಂದುಮತಿ ಎಡವೆ, ಬಾಲಾಜಿ ಅಮರವಾಡಿ, ಬಂಡೆಪ್ಪ ದ್ಯಾಡೆ, ಶಿವಾನಂದ ಮುಕ್ತೆದಾರ, ಮಹಾದೇವ ಮುದ್ದಾ, ಮಲ್ಲಿಕಾರ್ಜುನ ಜೋಜನಾ ಸೇರಿದಂತೆ ಇನ್ನಿತರರಿದ್ದರು.