ಹೊಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಚಿಟಗುಪ್ಪ:ಸೆ.೨೧:ಎರಡು ದಿನಗಳ ಮನ್ನಾಎಖೇಳಿ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ತಾಲೂಕಿನ ನಾಗನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಚಾಲನೆ ನೀಡಲಾಯಿತು.
ಎರಡು ದಿನಗಳ ಕಾಲ ಜರಗುವ ಕ್ರೀಡಾಕೂಟದಲ್ಲಿ ಮನ್ನಾಎಖೇಳಿ ಹೋಬಳಿ ವ್ಯಾಪ್ತಿಯ ಸುಮಾರು ೨೫ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕಬ್ಬಡ್ಡಿ, ಖೋಖೊ,ವಾಲಿಬಾಲ್, ವೇಗದ ಓಟ, ಲಾಂಗ್ ಜಂಪ್ ಸೇರಿದಂತೆ ಇನ್ನಿತರ ಆಟಗಳನ್ನು ಆಡಿಸಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳ ಹೆಸರುಗಳನ್ನು ಘೋಷಿಸಲಾಯಿತು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷರಾಗಿ ಮಾರುತಿ, ಮುಖ್ಯ ಅತಿಥಿಗಳಾಗಿ ಮಂಗಲಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡಲಿಕ್ ಅರ್ಕಿ ಭಾಗವಹಿಸಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ಜಮಾದಾರ್,ಸಿ ಆರ್ ಪಿ ಗಳಾದ ಪ್ರಭು, ರಾಜಕುಮಾರ್ ಹೊಸಮನಿ,,ದೈಹಿಕ ಶಿಕ್ಷಕರ ಅಧ್ಯಕ್ಷರಾದ ಕಾಶಪ್ಪ,ಶಿಕ್ಷಕರಾದ ,ರಮೇಶ ಕ್ಯಾತ,ಪ್ರಭಾವತಿ,ಕಸ್ತೂರಿ,ಮಹೇಶ್, ಶಿವಕುಮಾರ್ ರಾಥೋಡ್,ಚಂದ್ರಶೆಟ್ಟಿ,ಸುಕೇಶನಿ,ಲಲಿತ,ಸುಧೀರ್ ಕುಮಾರ್, ನಿಕಿತಾ, ರಜಿಯಾ, ಶಂಕರ್,ಸುಭಾಷ್ ಪವಾರ ರಾಜಕುಮಾರ್ ಉಪ್ಪಿನ್. ಸೇರಿದಂತೆ ಇತರರಿದ್ದರು.