ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಧೃಢ- ಜಿಲ್ಲಾಧಿಕಾರಿ ಅಕ್ರಂಪಾಷ
ಕೋಲಾರ.ಸೆ.೨೧-ದೈಹಿಕವಾದ ಕ್ರೀಡಾ ಚಟುವಟಿಕೆಗಳ ಅಭ್ಯಾಸವು ನಿರಂತರವಾಗಿ ಮುಂದುವರೆಸಿದಾಗ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವು ಸಧೃಡವಾಗಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಭಿಪ್ರಾಯ ಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ೨೦೨೪-೨೫ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ ೧೪-೧೭ ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೊಟವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ರೀಡಾ ಕೊಟವನ್ನು ನೋಡುತ್ತಿದ್ದರೆ ನನ್ನ ಬಾಲ್ಯದ ವಿದ್ಯಾರ್ಥಿ ದೆಸೆಯಲ್ಲಿನ ಕ್ರೀಡಾ ಚಟುವಟಿಕೆಗಳು ನನೆಪಿಗೆ ಬರಲಿದೆ, ಕ್ರೀಡೆಗಳಲ್ಲಿ ಸೋಲು ಗೆಲವುಗಳು ಸಹಜವಾದ ಪ್ರಕ್ರಿಯೆಗಳು. ಸೋಲುಂಟಾದರೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದ ಹಿಂಜರಿಯುವಂತಾಗ ಬಾರದು ಇಂದಿನ ಸೋಲು ಮುಂದಿನ ಗೆಲುವಿನ ಸೋಪಾನ ಎಂದು ತಿಳಿದು ಮುಂದುವರೆಯ ಬೇಕೆಂದು ಕರೆ ನೀಡಿದರು,
ಕ್ರೀಡೆಗಳಲ್ಲಿ ಸ್ಪೊರ್ತಿ ಮತ್ತು ಧೈರ್ಯದಿಂದ ಯಾವೂದೇ ಗೊಂದಲಕ್ಕೆ ಒಳಗಾಗದೆ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತರುವಂತಾಗಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಆರ್.ಗೀತಾ ಮಾತನಾಡಿ ಪ್ರಸಕ್ತಸಾಲಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ ಬಾಲಕಿಯರ ಕ್ರೀಡಾ ಕೊಟದ ಅವಕಾಶಗಳನ್ನು ಸದ್ಬಳಿಸಿ ಕೊಂಡು ನಿಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸ ಬೇಕು, ವಿದ್ಯಾರ್ಥಿಗಳಿಗೆ ಶಿಕ್ಷಣವು ಎಷ್ಟು ಮುಖ್ಯವೋ ಕ್ರೀಡೆಗಳು ಸಹ ಅಷ್ಟೆ ಮುಖ್ಯ ಹಾಗಾಗಿ ಕ್ರೀಡೆಗಳಿಂದ ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಸಧೃಡವಾಗಿ ಕಾಪಾಡಿ ಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ, ವಿವಿಧ ಸಂಘಟನೆಗಳ ಅಧ್ಯಕ್ಷರಾದ ಎಂ.ಮಂಜುನಾಥ್, ಹೆಚ್.ಶಿವಕುಮಾರ್, ವಿ.ಮುರಳಿಮೋಹನ್, ವಿ,ವಿ.ರಾಮಕೃಷ್ಣ, ಆಂಜನೇಯ, ಕೆ.ನಾರಾಯಣರೆಡ್ಡಿ, ಆರ್.ನಾಗರಾಜ್, ಸಂತೋಷ ಕುಮಾರ್, ಮಾರ್ಕೋಂಡಪ್ಪ ಮುಂತಾದವರು ಉಪಸ್ಥಿತರಿದ್ದರು.