ಜಿಲ್ಲಾ ಮಟ್ಟಕ್ಕೆ ದಾನಮ್ಮ ಕಾಲೇಜಿನ ಮಕ್ಕಳು ಆಯ್ಕೆ
ಜೇವರ್ಗಿ:ಸೆ.೨೧: ಶ್ರೀಮತಿ ದಾನಮ್ಮ ಪಪೂ ಕಾಲೇಜಿನ ಮಕ್ಕಳು ತಾಲ್ಲೂಕು ಮಟ್ಟದ ಪಪೂ ಕಾಲೇಜುಗಳ ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುರುವಾರದಂದು ತಾಲ್ಲೂಕು ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಯ ಭೇರಿ ಬಾರಿಸಿದರು.
ಶ್ರೀಮತಿ ದಾನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಖೋ..ಖೋ ಪಂದ್ಯವನ್ನು ಆಡುವ ರೀತಿ ನೋಡಿದರೆ ಒಂದು ಕ್ಷಣ ನೋಡುಗರ ಮೈ ಜುಮ್ ಅನ್ನಿಸುವಂತಿತ್ತು.ಕೊನೆಯ ಪೈನಲ್ ಪಂದ್ಯವೂ ಆಡಿದ ರೀತಿ ನಿಜಕ್ಕೂ ಇಂದಿಗೂ ಕಣ್ಮಿಂಚಿನಲ್ಲಿ ಹರಿದಾಡುವಂತಿದೆ ಎಂದು ಪ್ರೇಕ್ಷಕ ವರ್ಗದವರ ಆಖ್ಯಾನ. ಪೈನಲ್ ಖೋ ಖೋ ಪಂದ್ಯವು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀಮತಿ ದಾನಮ್ಮ ಕಾಲೇಜು ನಡುವೆ ನಡೆಯಿತು. ಸರಕಾರಿ ಕಾಲೇಜಿನ ವಿಧ್ಯಾರ್ಥಿಗಳು ಎರಡು ವಿಕೇಟ್ ಪಡೆದರೇ,ದಾನಮ್ಮ ಕಾಲೇಜಿನ ಮಕ್ಕಳು ಎಂಟು ವಿಕೇಟ್ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಶ್ರೀಮತಿ ದಾನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಖೋ ಖೋ ಮತ್ತು ಪುಟ್ಬಾಲ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿ ಆದ್ಯಕ್ಷರಾದ ಕೇದಾರಲಿಂಗಯ್ಯ ಹಿರೇಮಠ, ಕಾರ್ಯದರ್ಶಿ ಮಹಾಂತಯ್ಯ ಸಿ ಹಿರೇಮಠ ಪ್ರಾಚಾರ್ಯ ಜಗದೀಶ್ ಎಸ್ ಉಕನಾಳಕರ್ ಹಾಗೂ ಉಪನ್ಯಾಸಕರು ವಿಧ್ಯಾರ್ಥಿಗಳ ಸಾಧಕರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.