ಮೋದಿ ಅವರ ಸಾಧನೆಯ ಮನವರಿಕೆಯೊಂದಿಗೆ ಸದಸ್ಯತ್ವ ಅಭಿಯಾನ: ಗುತ್ತೇದಾರ
ಆಳಂದ:ಸೆ.೨೧: ಮಾಜಿ ಜಿ.ಪಂ ಉಪಾಧ್ಯಕ್ಷ ಹರ್ಷಾನಂದ ಎಸ್. ಗುತ್ತೇದಾರ ನೇತೃತ್ವದಲ್ಲಿ ಶುಕ್ರವಾರ ಮಾದನಹಿಪ್ಪರ್ಗಾ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಜರುಗಿತು.
ಇದೇ ವೇಳೆ ಮಾತನಾಡಿದ ಹರ್ಷಾನಂದ ಗುತ್ತೇದಾರ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡುವುದರ ಜೊತೆಗೆ ಸದಸ್ಯತ್ವ ನೊಂದಣಿ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮ್ಮುಖದಲ್ಲಿ ಪಕ್ಷದ ಪ್ರಥಮ ಸದಸ್ಯತ್ವ ಪಡೆಯುವ ಮೂಲಕ ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಅಂತೆಯೇ ತಾಲೂಕಿನಲ್ಲಿ ಕೂಡ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲದ ಪ್ರಮುಖರಾದ ಮಲ್ಲಿನಾಥ ಪರೇಣಿ, ಸಿದ್ದಾರಾಮ ತೋಳನೂರ, ತಾಪಂ ಮಾಜಿ ಸದಸ್ಯ ಬಸವರಾಜ ಸಾಣಕ, ಸಿದ್ದಾರೂಢ ಸಮತಾಜೀವನ, ಗಣೇಶ ಓಣಮಶೆಟ್ಟಿ, ಸೀತಾರಾಮ ಜಮಾದಾರ ಸೇರಿದಂತೆ ಮಾದನಹಿಪ್ಪರ್ಗಾ ಶಕ್ತಿ ಕೇಂದ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರಮುಖರು, ಮುಖಂಡರು, ಕಾರ್ಯಕರ್ತರು ಹಾಗೂ ಇನ್ನಿತರರು ಇದ್ದರು.