ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಲಹೆ
ಬಸವಕಲ್ಯಾಣ:ಸೆ.೨೧: ಮಕ್ಕಳ ಹಕ್ಕುಗಳಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಮುಂಜಾಗೃತೆ ವಹಿಸಿ ಅಧಿಕಾರಿಗಳು ತಮ್ಮ ಜವಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು, ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ನಗರದ ತಾಪಂ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ-೪೨ ರಷ್ಟು ಜನ ಮಕ್ಕಳಿದ್ದಾರೆ ಅವರಿಗೆಬೇಕಾದ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ಈ ಸಭೆಯಲ್ಲಿ ಪರಿಹಾರ ಕಲ್ಪಿಸಲು ಈ ಸಭೆ ಕರೆಯಲಾಗಿದೆ. ತಮ್ಮ ಪರಿಸರದಲ್ಲಿ ಯಾವುದೇ ಮಗುವಿಗೆ ಅನ್ಯಾಯವಾದಲ್ಲಿ ತಮ್ಮ ಜವಬ್ದಾರಿ ಸ್ಥಾನ ಅರಿತು ನ್ಯಾಯ ಕಲ್ಪಿಸಿಕೊಡಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಾಲಾ, ಅಂಗನವಾಡಿ, ವಸತಿ ನಿಲಯ, ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಮನಸ್ಸು ಮಾಡಿ ಉತ್ತಮ ಕರ್ತವ್ಯ ನಿರ್ವಹಿಸಿದ್ದೇ ಆದಲ್ಲಿ ಸುಂದರ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ. ಆದರೆ ಕೆಲ ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ಕಂಡು ಬರುತ್ತಿದೆ ಅದನ್ನು ಸರಿಪಡಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳಿಗೆ ಸಂಬAಧಿಸಿದAತೆ ಕಳೆದ ಮೂರು ವರ್ಷದಲ್ಲಿ ಸುಮಾರು ೧೦ ಸಾವಿರ ಪೋಸ್ಕೋ ಪ್ರಕರಣಗಳು ದಾಖಲಾಗಿವೆ. ಇತ್ತೀಚಿಗೆ ಜಿಲ್ಲೆಯ ಬಗದಲ್ ಹಾಗೂ ಕಮಲನಗರದಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿವೆ ಇದರಲ್ಲಿ ಕೆಲ ಶಿಕ್ಷಕರೇ ಪಾಲ್ಗೊಳ್ಳುತ್ತಿರುವದು ದುಖದ ವಿಷಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿ ಮುಂದುವರೆದ ರಾಜ್ಯವಾಗುತ್ತಿದೆ ಆದರೂ ಸಹ ಬಾಲ್ಯ ವಿವಾಹಗಳ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ೧೦೦ಕ್ಕೆ ಶೆ-೧೯ ರಷ್ಟು ಬಾಲ್ಯ ವಿವಾಹಗಳು ನಡೆಯುತ್ತಿವೆ ಇದಕ್ಕೆ ತಿಳಿವಳಿಕೆ ಕಾರಣವಾ ಅಥವಾ ಪಾಲಕರ ಒತ್ತಾಯದ ಮೇರೆಗೆ ಮಕ್ಕಳ ಬಾಲ್ಯ ವಿವಾಹಗಳು ನಡೆಯುತ್ತಿವೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.
ತಾಲೂಕಿನ ಶಾಲೆಯೊಂದರಲ್ಲಿ ೯ನೇ ತರಗತಿಯಲ್ಲಿ ೧೩ ವಿದ್ಯಾರ್ಥಿಗಳಿದ್ದಾರೆ. ಆದರೆ ೧೦ನೇ ತರಗತಿಗೆ ವಿದ್ಯಾರ್ಥಿಗಳು ಬರುತ್ತಿಲ್ಕ ಅಲ್ಲದೆ ಇದೇ ಶಾಲೆಯಲ್ಲಿ ಮೂರು ಬಾಲ್ಯವಿವಾಹಗಳು ನಡೆದಿವೆ. ತಪ್ಪಿತಸ್ಥರ ವಿರುದ್ದ ಪೋಸ್ಕೋ ಪ್ರಕರಣ ದಾಖಲಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಶಶಿಧರ ಕೋಸಂಬೆ ಅವರು ಸಭೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ ಅವರಿಗೆ ಸೂಚಿಸಿದರು. ಅಲ್ಲದೆ ಒಂದೇ ಮಗುವಿನ ದಾಖಲಾತಿ ಎರಡೆರಡು ಕಡೆಗಳಲ್ಲಿ ದಾಖಲು ಮಾಡಲಾಗಿದೆ ಅದನ್ನು ಸರಿಪಡಿಸಬೇಕು ಇದನ್ನು ಸರಿಪಡಿಸಿ ಯಾವುದೇ ಮಗು ಶಿಕ್ಷಣದಿಂದ ವಂಚಿತಗೊಳ್ಳದAತೆ ಮುಂಜಾಗೃತೆ ವಹಿಸಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಲ್ಲಿ ಕಳೆದ ಎಪ್ರೀಲ್ ತಿಂಗಳಿAದ ಇಲ್ಲಿವರೆಯೆ ಎಷ್ಟು ಹೆರಿಗೆಗಳಾಗಿವೆ. ಇದರಲ್ಲಿ ನಾರ್ಮಲ್ ಎಷ್ಟು-ಸಿಜೇರಿಯನ್ ಎಷ್ಟು ಎಂಬ ಕುರಿತು ಮಾಹಿತಿ ನೀಡುವಂತೆ ಕೋಸಂಬೆ ಅವರು ತಾಲೂಕು ಆರೋಗ್ಯ ಅಧಿಕಾರಿಗೆ ಪ್ರಶ್ನಿಸಿದರು. ಇದಕ್ಕೆ ತಪ್ಪು ಉತ್ತರ ನೀಡಿದರು. ಆದರೆ ನೀಡಿದ ಉತ್ತರದಲ್ಲಿ ಅಂಕಿಸAಖ್ಯೆಗಳ ತುಲನೆಯಾಗಿಲ್ಲ ಹೀಗಾಗಿ ಸಮರ್ಪಕ ಮಾಹಿತಿ ತರಬೇ ಸಭೆಗೆ ತಪ್ಪು ಮಾಹಿತಿ ನೀಡಿದ್ದರಿಂದ ಇವರ ವಿರುದ್ದ ಮೇಲಾಧಿಕಾರಿಗಳಿಗೆ ವರದಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಉತ್ತಮವಾದ ಆಹಾರ ಪೋರೈಸುವಲ್ಲಿ ಗುತ್ತಿಗೆದಾರರು ವಿಫಲರಾಗುತ್ತಿದ್ದಾರೆ ಅವರಿಗೆ ನೋಟಿಸ್ ನೀಡಿ ಉತ್ತಮ ಆಹಾರ ಪೋರೈಕೆಗೆ ತಿಳಿಸಿ ಆದರೂ ಸಹ ನೀಡದಿದ್ದಲ್ಲಿ ಆ ಗುತ್ತಿಗೆದಾರರಿಗೆ ಕಪ್ಪು ಪಟ್ಟಿಗೆ ಸೇರಿಸಲು ಕ್ರಮಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ ಅವರಿಗೆ ನಿರ್ದೇಶನ ನೀಡಲಾಯಿತು.
ತಾಲೂಕಿನ ಮುಡಬಿ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ನಿಲಯದ ಮಕ್ಕಳಿಗೆ ಚರ್ಮ ರೋಗ ಇದ್ದರೂ ಸಹ ಸಮರ್ಪಕವಾದ ಚಿಕಿತ್ಸೆ ನೀಡುವಲ್ಲಿ ಅಲ್ಲಿನ ಸ್ಪಾಫ್ ನರ್ಸ ಅವರ ಕೆಲಸ ಸಮರ್ಪಕವಾಗಿಲ್ಲ ಜೊತೆಗೆ ಅಲ್ಲಿನ ಗಣಿತ ಶಿಕ್ಷಕರು ಮಾಡಿರುವ ಪಾಠ ವಿದ್ಯಾರ್ಥಿಗಳಿಗೆ ತಿಳಿಯದ ಹಿನ್ನಲೆಯಲ್ಲಿ ಸ್ಟಾಫ್ ನರ್ಸ ಹಾಗೂ ಗಣಿತ ಶಿಕ್ಷಕರನ್ನು ಕೂಡಲೇ ಹುದ್ದೆಯಿಂದ ಬಿಡುಗಡೆಗೊಳಿಸಲು ಬೇಕಾದ ಕ್ರಮಕೈಗೊಳ್ಳಬೇಕು ಎಂದು ವಸತಿ ಶಾಲೆಯ ಪ್ರಾಚಾರ್ಯರಿಗೆ ತಿಳಿಸಿದರು.
ವೇದಿಕೆಯಲ್ಲಿ ತಹಸೀಲ್ದಾರ ದತ್ತಾತ್ರೆಯ ಗಾದಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ, ಸಿಡಿಪಿಓ ಗೌತಮ ಸಿಂಧೆ, ಸಿಪಿಐ ಅಲಿಸಾಬ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.
ಶ್ರೀ ಸ್ಕಾö್ಯನಿಂಗ್ ಹಾಗೂ ರೀಫಾ ಆಸ್ಪತ್ರೆಯ ವಿರುದ್ದ ಕ್ರಮಕ್ಕೆ ಸೂಚನೆ
ಪ್ರಗತಿ ಪರಿಶೀಲನಾ ಸಭೆಯ ಮುನ್ನ ನಗರದ ಸರಕಾರಿ ಆಸ್ಪತ್ರೆಗೆ ತೆರಳಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಪರಿಶೀಲಿಸಿದರು. ಆಸ್ಪತ್ರೆಯ ಐಸಿಯು, ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರಕ್ಕೆ ತೆರಳಿ ವ್ಯವಸ್ಥೆ ಪರಿಶೀಲಿಸಿದರು. ಸ್ಥಳದಲ್ಲಿದ್ದ ಮುಖ್ಯ ವೈದ್ಯಾಧಿಕಾರಿ ಡಾ. ಅಪರ್ಣಾ ಮಹಾನಂದ ಅವರು ಕೋಸಂಬೆ ಅವರಿಗೆ ಮಾಹಿತಿ ನೀಡಿದರು.
ನಂತರ ಶಿವಪೂರ ರಸ್ತೆಯಲ್ಲಿರುವ ಶ್ರೀ ಸ್ಕಾö್ಯನಿಂಗ್ ಸೆಂಟರ್‌ಗೆ ಹಾಗೂ ಬಸ್ ನಿಲ್ದಾಣದ ಬಳಿ ಇರುವ ರೀಫಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಎರಡೂ ಕಡೆಗಳಲ್ಲಿ ದರದ ನಾಮ ಫಲಕ, ಸ್ಕಾö್ಯನಿಂಗ್ ಸೆಂಟರ್‌ನಲ್ಲಿ ಸಿಸಿಟಿವಿ ಅಳವಡಿಕೆ, ರೋಗಿಗಳಿಗೆ ರಸೀದಿ ನೀಡದಿರುವದು ಕಂಡು ಬಂದಿದ್ದು ನಿಯಮಗಳು ಗಾಳಿಗೆ ತೂರಿ ಕಾನೂನು ಪಾಲಿಸಲು ವಿಫಲವಾಗಿದ್ದರಿಂದ ಶ್ರೀ ಸ್ಕಾö್ಯನಿಂಗ್ ಸೆಂಟರ್ ಹಾಗೂ ರೀಫಾ ಆಸ್ಪತ್ರೆಯ ವಿರುದ್ದ ಕ್ರಮಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ವಿಷಯ ಸಕ್ಷಮ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಬೇಕು ಎಂದು ಕೋಸಂಬೆ ಅಧಿಕಾರಿಗಳಿಗೆ ತಿಳಿಸಿದರು.