ಕರ್ನಾಟಕ ಬಯಲಾಟ ಅಕಾಡೆಮಿಗೆ ಅನಸೂಯಾ ವಡ್ಡರ ನೇಮಕ: ಕಸಾಪ ಸನ್ಮಾನ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.19: ಬಬಲೇಶ್ವರ ಪಟ್ಟಣದ ಅನುಸೂಯಾ ವಡ್ಡರ ಅವರಿಗೆ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾಗಿ ನೇಮಕ ಮಾಡಿದ್ದಕ್ಕೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಬಲೇಶ್ವರದಲ್ಲಿ ಅನಸೂಯಾ ಅವರ ಮನೆಯಲ್ಲಿ ಸÀನ್ಮಾನಿಸಿ ಗೌರವಿಸಲಾಯಿತು. .
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಹಾಗೂ ಗೌರವಿಸುವ ಕಾರ್ಯ ಮಾಡುತ್ತಿರುವದು ಹೆಮ್ಮೆಯ ವಿಷಯ ಎಂದು ನುಡಿದರು.
ಶ್ರೀ ಕೃಷ್ಣ ಪಾರಿಜಾತದಲ್ಲಿ ಅನೇಕ ಬಯಲಾಟ ಪಾತ್ರ ನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದು ಅನಸೂಯಾ ಅವರು ನಾಡಿಗೆ ಗೌರವ ತಂದಿದ್ದಾರೆ ಎಂದರು.
ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕಲಾವಿದರನ್ನು ಪೆÇ್ರೀತ್ಸಾಹಿಸುವದು ನಮ್ಮೆಲ್ಲರ ಕರ್ತವ್ಯ. ಜಾನಪದ ಕಲೆಗಳು ನಮ್ಮೆಲ್ಲರ ಸಂಸ್ಕøತಿಯ ಪ್ರತೀಕ. ಕಲಾವಿದರನ್ನು ಸರ್ಕಾರ ವಿಶೇಷ ಅನುದಾನ ನೀಡಿ ಉತ್ತೇಜಿಸಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಸೂಯ ವಡ್ಡರ, ನಾನು ಬಾಲ್ಯದಿಂದ ಪ್ರತಿಭಾವಂತ ಕಲಾವಿದೆಯಾಗಿ ಸೇವೆ ಮಾಡಿದ್ದೇನೆ. ಇದು ನನ್ನ ಹವ್ಯಾಸ ಎಂದರು.
ನಿಂಗಪ್ಪ ಬಿರಾದಾರ, ರಾಜು ಅಂಗಡಿ, ಹಸನ ಸೊನ್ನದ, ಮಹಿಬೂಬ ಮುಜಾವರ ಮುಂತಾದವರು ಉಪಸ್ಥಿತರಿದ್ದರು