ಯುವಕರ ಬದುಕು ತಪಸ್ವಿಯಂತಾಗಬೇಕು:ಜಂಬುನಾಥ ಕಂಚ್ಯಾಣಿ
ವಿಜಯಪುರ,ಏ.18:ಪ್ರಾಮಾಣಿಕ ಸಮಾಜ ಸೇವೆಯಿಂದ ಸದೃಢ ಸಮಾಜ ನಿರ್ಮಾಣಕ್ಕೆ ಯುವಕರು ಪಣ ತೊಡಬೇಕು. ಸಾಮಾಜಿಕ ಅಸಮಾನತೆ ಹೋಗಲಾಡಿಸುವುದು ಎಲ್ಲರ ಮುಖ್ಯ ಗುರಿಯಾಗಿರಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ನಗರ ಘಟಕದ ಉದ್ಘಾಟನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ತಮ್ಮ ನಿಜ ಜೀವನದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಯುವಕರ ಬದುಕು ತಪಸ್ವಿಯಂತಾಗಬೇಕು. ಅವರು ತಮ್ಮ ಬದುಕಿನಲ್ಲಿ ಸಹಕಾರ, ಸಹಬಾಳ್ವೆ, ಸಹೋದರತ್ವ, ಶಿಸ್ತು, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ, ದೃಢ ನಂಬಿಕೆ, ಶ್ರದ್ಧಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಆದರ್ಶ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವ್ಹಿ.ಸಿ. ನಾಗಠಾಣ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯಕ್ಕಾಗಿ ಸತ್ಯ, ನಿμÉ್ಠ ಹಾಗೂ ಪ್ರಾಮಾಣಿಕತೆಯಿಂದ ಶ್ರಮಿಸಬೇಕು ಎಂದು ಹೇಳಿದರು.
ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ವೇದಿಕೆಯ ಉದ್ದೇಶ, ಗುರಿ, ಸಾಮಾಜಿಕ ಪ್ರಜ್ಞೆಯ ಕಾರ್ಯ ಚಟುವಟಿಕೆಗಳ ಕುರಿತು ತಿಳಿಸುತ್ತಾ, ಆಧುನಿಕ ಯುಗದಲ್ಲಿ ದೇಶದ ಭವಿಷ್ಯ ಯುವಕರ ಕೈಯಲ್ಲಿದ್ದು, ಯುವ ಪೀಳಿಗೆ ಅಂಬೇಡ್ಕರ್ ಅವರ ವಿಚಾರಧಾರೆಯನ್ನರಿತು, ಮುನ್ನಡೆದಾಗ ಭವ್ಯ ರಾಷ್ಟ್ರದ ಕನಸು ಸಾಕಾರಗೊಳ್ಳುತ್ತದೆ ಎಂದು ಹೇಳಿದರು.
ಸಿದ್ದಸಿರಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಆರ್.ಟಿ. ಪಾಟೀಲ, ಉಪನ್ಯಾಸಕ ಅಮರೇಶ ಸಾಲಕ್ಕಿ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಗದೀಶ ಗುಳೇದಗುಡ್ಡ (ಅಧ್ಯಕ್ಷ), ಸಂತೋಷ ಹೆಗಡೆ, ಅನಿಲ ಮುಳಸಾವಳಗಿ (ಉಪಾಧ್ಯಕ್ಷರು), ಆಕಾಶ ರಾಮತೀರ್ಥ (ಪ್ರಧಾನ ಕಾರ್ಯದರ್ಶಿ), ಪ್ರಶಾಂತ ಹಾರವಾಳ (ಕಾರ್ಯದರ್ಶಿ), ಐಗೊಂಡ ಕಗ್ಗೋq (ಸಹ ಕಾರ್ಯದರ್ಶಿ), ಆಕಾಶ ಕೋಳಿ (ಸಂಘಟನಾ ಕಾರ್ಯದರ್ಶಿ), ಗುರುದಾಸ ಗುಗ್ಯಾಳ (ಸಹ ಸಂಘಟನಾ ಕಾರ್ಯದರ್ಶಿ), ದತ್ತಾತ್ರೇಯ ವಡ್ಡರ (ಖಜಾಂಚಿ) ಅವರು ಅಧಿಕಾರ ಸ್ವೀಕರಿಸಿದರು.
ವೈಷ್ಣವಿ ಬಳ್ಳಾರಿ, ಅರುಣ, ಉದಯ, ಸಂಪ್ರೀತ, ರಾಘವೇಂದ್ರ, ಜೇಮ್ಸ್, ಕೃμÁ್ಣ, ಮನೋಜ್, ಪ್ರವೀಣ, ಮಲ್ಲು, ಪ್ರತೀಕ, ಸೋಮನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.