ಶ್ರೀ ರಾಮ ನವಮಿ ಆಚರಣೆ
ವಿಜಯಪುರ,ಏ.18: ನಗರದ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಮ ನವಮಿಯನ್ನು ಆಚರಿಸಲಾಯಿತು.
ತನ್ನಿಮಿತ್ತ ಬೆಳಿಗ್ಗೆ 6 ಗಂಟೆಯಿಂದ ಹೋಮ ಹವನ ಪೂಜಾ ಕಾರ್ಯಕ್ರಮಗಳೊಂದಿಗೆ ಸರಳವಾಗಿ ರಾಮ ನವಮಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಮಾತಾನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಈ ವರ್ಷ ಕೇವಲ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಕೋಲಾಟ, ಆರತಿ, ಮಹಾಪೂಜೆ, ರಾಮಜಪದೊಂದಿಗೆ ರಾಮ ನವಮಿ ಆಚರಿಸಲಾಯಿತು. ರಾಮ ನವಮಿ ಉತ್ಸವದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ, ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ. ರಾಮ ನವಮಿಯು ಸದಾಚಾರದ ಶಾಶ್ವತ ತತ್ವಗಳ ಜ್ಞಾಪನೆಯಾಗಿ ಕಾರ್ಯ ನಿರ್ವಹಿಸುತ್ತದೆ. ಭಗವಾನ್ ರಾಮನ ಜೀವನವು ಕರ್ತವ್ಯ, ಗೌರವ ಮತ್ತು ತ್ಯಾಗದ ಆದರ್ಶಗಳನ್ನು ನಮಗೆ ಕಲಿಸುತ್ತದೆ. ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಸದಾಚಾರದ ಜೀವನವನ್ನು ನಡೆಸಲು ಭಕ್ತರನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಭುಯ್ಯಾರ, ಶರಣು ಸಬರದ, ಮಹೇಶ ಜಾಧವ, ಶ್ರೀಶೈಲ ಹಿರೇಮಠ, ಸಚಿನ ಸವನಳ್ಳಿ, ಸಂತೋಷ ವೆಂಕಪ್ಪಗೋಳ, ಅಪ್ಪು ಪೆಡ್ಡಿ, ಸತೀಶ ಗಾಯಕವಾಡ, ನಾರಾಯಣಸಿಂಗ ಹಜೇರಿ, ಅಮಿತ ಅವಜಿ, ಆನಂದ ಬಂಡಿ, ಗಿರಿಜಾ ಬರಡೋಲಮಠ, ಜೋತಿ ಹಿರೇಮಠ, ಜಯಶ್ರೀ ಕನ್ನೂರ, ಭಾರತಿ ಭುಯ್ಯಾರ, ದೀಪಾ ಭಿಸೆ, ಆನಂದ ರೂಗಿ ಮತ್ತು ಸಮತಿ ಸದಸ್ಯರು ಉಪಸ್ಥಿತರಿದ್ದರು