ಆತ್ಮವಿಶ್ವಾಸ ಹಾಗೂ ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ : ಡಾ.ವಿ.ವಿ ನಾಗರಾಜ
ಬೀದರ್ :ಏ.18: ಇಂದಿನ ಯುವಜನತೆ ಚಂಚಲತೆಗೆ ಬಲಿಯಾಗದೆನೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಸಾಧನೆ ಮಾಡುವ ಮೂಲಕ ಜೀವನದಲ್ಲಿ ಗುರಿಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕಣ್ಣು,ಕಿವಿ,ಮೂಗಿನ ತಜ್ಞರಾದ ಡಾ.ವಿ.ವಿ ನಾಗರಾಜ ಹೇಳಿದರು.
ನಗರದ ಸನಸಾಫ್ಟ್ ಪದವಿ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಏರ್ಪಡಿಸಿದ್ದ ಉಚಿತ ಸಿಇಟಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ಕೇವಲ ಶಿಕ್ಷಣ ನೀಡುತ್ತಾರೆ ಅವರು ನೀಡಿದ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಪಡಬೇಕು. ಆಗ ಮಾತ್ರ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ. ಪ್ರಯತ್ನ ವಿಲ್ಲದೇ ಯಾವ ಯಶಸ್ಸು ಕೂಡ ದೊರಕಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಾತೆ ಮಾಣಿಕೇಶ್ವರಿ ಕಾಲೇಜಿನ ಆಡಳಿತಾಧಿಕಾರಿ ಲೋಕೆಶ ಉಡಬಾಳೆ ಮಾತನಾಡಿ ಪುಸ್ತಕವೇ ವಿದ್ಯಾರ್ಥಿಯ ಅತ್ಯುತ್ತಮ ಸ್ನೆ?ಹಿತ ಓದುವ ಸಮಯ ಮತ್ತೆ ಬರುವುದಿಲ್ಲ ಆದಕಾರಣ ವಿದ್ಯಾರ್ಥಿಗಳು ಯಾವುದೆ ಕಾರಣಕ್ಕು ಸಮಯ ವ್ಯರ್ಥ ಮಾಡದೇನೆ ಹೆಚ್ಚೆಚ್ಚು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಸ್ಪರ್ಧಾ ಜಗತ್ತಿನಲ್ಲಿ ಉನ್ನತ ವ್ಯಾಸಂಗ ಮಾಡಿ ಒಳ್ಳೆಯ ಜ್ಞಾನ ಸಂಪಾದಿಸಿದರೆ ಸಾಕು ಯಶಸ್ಸು ಗಳಿಸಿ ಪ್ರಗತಿಯ ದಿಕ್ಕಿನಲ್ಲಿ ಸಾಗಬಹುದು ಎಂದರು.
ಎಬಿವಿಪಿ ಅಧ್ಯಕ್ಷರಾದ ಡಾ.ಸಂತೋಷ ಹಂಗರಗಿ ಮಾತನಾಡಿ ವಿದ್ಯಾರ್ಥಿ ಪರಿಷತ್ ಇಡಿ ದೇಶದಲ್ಲಿಯೆ ಬಹುದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಸದಾಕಾಲ ವಿದ್ಯಾರ್ಥಿಗಳ ಹಿತವನ್ನು ಬಯಸುತ್ತಾ ಸಮಾಜದ ಹಿತವನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಕೆಲಸ ಮಾಡುತ್ತಿದೆ ಈ ನಿಟ್ಟಿನಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ ಕೂಡ ಪ್ರಮುಖವಾದುದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಅಮರ ಹಲ್ಮಡಗೆ,ಅನೀಲ ಜಾಧವ್ ಹೇಮಂತ್ ಸಂಘಟನ ಕಾರ್ಯದರ್ಶಿ ಶಿವಾನಿ ನಗರ ಕಾರ್ಯದರ್ಶಿ,ನಾಗರಾಜ್ ,ಶಶಿಕಾಂತ್, ಸಾಯಿ ಕಿರಣ್ ,ಪವನ್ ,ಮಹೇಶ್ ,ಅಮರ್ ಸೆರಿದಂತೆ ಇತರರಿದ್ದರು