ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಮಂಡಳದಿಂದ ಅಂಬೇಡ್ಕರ್ ಜಯಂತಿ
ಬೀದರ್ :ಏ.18:ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳದ ವತಿಯಿಂದ ನಡೆಯುತ್ತಿರುವ ಸ್ವಧಾರ ಕೇಂದ್ರ ಆವರಣದಲ್ಲಿ ಇತ್ತೀಚೆಗೆ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಅರ್ಥಪೂರ್ಣವಾಗಿ ಜರುಗಿತ್ತು. ಸ್ವಧಾರ ಕೇಂದ್ರದ ಆಪ್ತ ಸಮಾಲೋಚಕ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಸಿಬ್ಬಂದಿ ಮನೋಹರ ಸಾಳುಂಕೆ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಬೇಡ್ಕರ್ ಅವರು ಈ ವಿಶ್ವ ಕಂಡ ಸೂರ್ಯನಿದ್ದಂತೆ. ದೇಶವನ್ನು ನಡೆಯಲು ಒಂದು ಸಂವಿಧಾನದ ಅಗತ್ಯತೆಯನ್ನು ಗಣನೆಗೆ ತೆಗೆದುಕೊಂಡ ಅಂಬೇಡ್ಕರ್ ಅವರು, ವಿಶ್ವದ ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಒಂದು ಪ್ರಬುದ್ಧ ಸಂವಿಧಾನವನ್ನು ಧಾರೆಯಾರೆದು ವಿಶ್ವಕ್ಕೆ ಮಾದರಿಯಾದರು. ಇಂದು ಅವರ ಜಯಂತಿಯನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ಹಾಗೂ ವಿಚಾಮಾನದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಲದಲ್ಲಿ ನಡೆಯುತ್ತಿರುವ ಸ್ವದರ ಹಾಗೂ ಸಾಂತ್ವನ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.